ಜೀವನ ಯಶಸ್ಸಿಗೆ ಮಾರ್ಗದರ್ಶನ ಅಗತ್ಯ

121122 Bagalawada Guruvandana Programmee
ಕವಿತಾಳ ಸಮೀಪದ ಬಾಗಲವಾಡದಲ್ಲಿ ಗುರುವಂದನ ಕಾರ್ಯಕ್ರಮವನ್ನು ಶಾಸಕ ರಾಜ ವೆಂಕಟಪ್ಪನಾಯಕ ಉದ್ಘಾಟಿಸಿದರು.
Published on

ಕವಿತಾಳ: ಸಮೀಪದ ಬಾಗಲವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಶನಿವಾರ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಾಜ ವೆಂಕಟಪ್ಪ ನಾಯಕ, ವಿದ್ಯೆ ಕಲಿಸುವ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಶಿವಯ್ಯಸ್ವಾಮಿ ಬಳ್ಳಾರಿ ತಾತ ಮಾತನಾಡಿ, ಕಠಿಣ ಪರಿಶ್ರಮದಿಂದ ಕಲಿತ ವಿದ್ಯೆ ಎಂದಿಗೂ ವ್ಯರ್ಥವಾಗುವುದಿಲ್ಲ. ಹಳೇಯ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದು ನಮ್ಮನ್ನು ಗುರುತಿಸಿ ಗುರುವಂದನಾ ಕಾರ್ಯಕ್ರಮವನ್ನು ನಡೆಸಿ ಗೌರವಿಸುತ್ತಿರುವುದು ಸಂತಸ ತಂದಿದೆ ಎಂದರು.

ಹಳೇಯ ವಿದ್ಯಾರ್ಥಿ ಮಲ್ಲಪ್ಪ ಚಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಲಿತಾ ಬಸವರಾಜ, ಪ್ರಮುಖರಾದ ಯಂಕೋಬ ನಾಯಕ, ಬಿಇಒ ಚಂದ್ರಶೇಖರ ದೊಡ್ಡಮನಿ, ಶಾಲೆಯ ಹಳೇ ವಿದ್ಯಾರ್ಥಿಗಳಾದ ಶಂಕರಯ್ಯಸ್ವಾಮಿ, ಚಂದ್ರಪ್ಪ, ಅಮರೇಶ ದೇಸಾಯಿ, ಶಿವುಕುಮಾರ ಪೋಪಾ, ರಾಜಶೇಖರ ಬಳಗಾನೂರ, ಹುಸೇನ್ ಬಾಷಾ, ಅಶೋಕ, ಈರಣ್ಣ, ಸರ್ವಮಂಗಳಾ ಮೇಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net