ಆಯುರ್ವೇದದಿಂದ ನೆಮ್ಮದಿಯ ಜೀವನ, ಡಾ.ಶರಣಪ್ಪ ಅನಿಸಿಕೆ

131022 Kavitala Ayurdeva Day
ತೋರಣದಿನ್ನಿಯಲ್ಲಿ ಪ್ರತಿದಿನ ಆಯುರ್ವೇದ ಪ್ರತಿ ಮನೆಯಲ್ಲಿಯೂ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಶರಣಪ್ಪ ಮಾತನಾಡಿದರು.
Published on

ಕವಿತಾಳ: ತೋರಣದಿನ್ನಿ ಬಸವೇಶ್ವರ ದೇವಸ್ಥಾನದ ಆವಾರಣದಲ್ಲಿ ಜಿಲ್ಲಾಡಳಿತ, ಜಿಪಂ, ಆಯುಷ್ ನಿರ್ದೇಶನಾಲಯ ಹಾಗೂ ಆಯುಷ್ ಇಲಾಖೆಯಿಂದ ಪ್ರತಿದಿನ ಆಯುರ್ವೇದ, ಪ್ರತಿ ಮನೆಯಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆಯುರ್ವೇದ ವೈದ್ಯಾಧಿಕಾರಿ ಶರಣಪ್ಪ ಮಾತನಾಡಿ, ಆಯುರ್ವೇದ ಚಿಕಿತ್ಸೆಯಿಂದ ದೀರ್ಘಾವಧಿ ಕಾಯಿಲೆಗಳನ್ನು ದೂರಮಾಡಬಹುದು, ಆಧುನಿಕ ಹಾಗೂ ಅಹಿತಕರ ಔಷಧ ಸೇವನೆ ಮಾರಕ ರೋಗಳು ಗುಣವಾಗುವ ಬದಲು ಹೆಚ್ಚುವಂತೆ ಮಾಡುತ್ತಿವೆ. ರಕ್ತದೊತ್ತಡ ಸೇರಿದಂತೆ ಬಹಳಷ್ಟು ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲಿಯೇ ಬರುತ್ತಿದ್ದು, ಆಯುರ್ವೇದ ಔಷಧ ಸೇವಿಸುವದರಿಂದ ಆರೋಗ್ಯದಿಂದ ಇರಬಹುದು. ಸರ್ಕಾರವು ಉಚಿತವಾಗಿ ಆರ್ಯರ್ವೇದ ಔಷಧ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೆಕು ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net