ಕಾವ್ಯ ವಾಚ್ಯಾರ್ಥಕ್ಕೆ ಸೀಮಿತ ಬೇಡ: ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಸಲಹೆ

18_09_Mdy_07(Kavigosti)
Published on

ಮಂಡ್ಯ: ಕಾವ್ಯ ವಾಚ್ಯಾರ್ಥಕ್ಕೆ ಸೀಮಿತವಾಗದೆ ಸೂಚ್ಯಾರ್ಥದ ಕಡೆಗೆ ಓದುಗನನ್ನು ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಇಂದಿನ ಕವಿಗಳ ಕವಿತೆಗಳು ಭರವಸೆ ಹುಟ್ಟಿ ಹಾಕಿವೆ ಎಂದು ಪಿಇಎಸ್ ಶಿಕ್ಷಣ ಮಹಾ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಅಭಿಪ್ರಾಯಿಸಿದರು.

ನಗರದ ಕರ್ನಾಟಕ ಸಂದ ಕೆ.ವಿ.ಶಂಕರಗೌಡ ಶತವಾನೋತ್ಸವ ಭವನದಲ್ಲಿ ಹಲಗೂರಿನ ಅನಿಕೇತನ ಪ್ರತಿಷ್ಠ್ಠಾನ ಮತ್ತು ಮಂಡ್ಯದ ಒಡನಾಡಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಪೂರ್ಣ ಚಂದ್ರ ತೇಜಸ್ವಿ ನೆನಪಿಗಾಗಿ ಆಯೋಜಿಸಿದ್ದ ಅಂತರ ಜಿಲ್ಲಾ ಕವಿಗೋಷ್ಠಿ ಉದ್ಘಾಟಿಸಿ ವಾತನಾಡಿದರು.

ವಾಚ್ಯಾರ್ಥ ಓದಿದಂತೆ ಅರ್ಥವಾದರೆ, ಸೂಚ್ಯಾರ್ಥ ಬಿಡಿಸಿದಂತೆಲ್ಲ ಅರ್ಥೈಸುತ್ತ ಹೋಗುತ್ತದೆ. ಈ ಅರ್ಥಗಳ ಬಿಡಿಸುವಿಕೆಯಲ್ಲಿ ಕವಿಯ ಹಾಗೂ ಕಾವ್ಯದ ಗುಣಮಟ್ಟ ಹೆಚ್ಚುತ್ತದೆ. ಮೌನಕ್ಕೆ ತುಂಬ ಶಕ್ತಿ ಇದೆ. ಕಲೆಯ ಅಂತಿಮ ಫಲ ನೋಡುಗ ಮತ್ತು ಕೇಳುಗನನ್ನು ಮೌನಕ್ಕೆ ದೂಡುವುದೇ ಆಗಿದೆ. ಒಳ್ಳೆಯ ಸಂವಾದವೇ ಮೌನ. ಬುದ್ಧನೂ ಸಹ ಹಲವಾರು ಸಂದರ್ಭದಲ್ಲಿ ಮೌನದ ಕಡೆ ವಾಲಿದ್ದಾನೆ. ಅದೇ ಯಶಸ್ಸು ಎಂದರು.

ಅನಿಕೇತನ ಪ್ರತಿಷ್ಠ್ಠಾನದ ಅಧ್ಯಕ್ಷ ಡಿ.ಉಮೇಶ್ ದಡಮಹಳ್ಳಿ ವಾತನಾಡಿ, ನಾಡಿನ ಸಾಂಸ್ಕೃತಿಕ, ಸಾಹಿತಿಕ, ಶೈಕ್ಷಣಿಕ, ಸಾವಾಜಿಕ ಕಾರ್ಯ ಚಟುವಟಿಕೆಗಳ ಆಯೋಜನೆಯ ಹಿನ್ನೆಲೆಯಲ್ಲಿ ಸಂಸ್ಥೆ ಪ್ರಾರಂಭಿಸಲಾಗಿದೆ. ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಹಲಗೂರು ಮತ್ತು ಮಳವಳ್ಳಿ ಗ್ರಾವಾಂತರ ಮಟ್ಟದಲ್ಲಿ ಸೀಮಿತವಾಗಿದ್ದ ಚಟುವಟಿಕೆಗಳನ್ನು ಇತ್ತೀಚೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲಾಗುತ್ತಿದೆ. ಈ ಹಂತಕ್ಕೆ ತಲುಪಲು ಸಹೃದಯರೇ ಕಾರಣ ಎಂದು ಸ್ಮರಿಸಿದರು.

ಮಂಡ್ಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಸ್.ಬಿ.ಜ್ಯೋತಿ, ಭಾರತ್ ವಿಕಾಸ್ ಪರಿಷತ್ ಮಳವಳ್ಳಿ ತಾಲೂಕು ಅಧ್ಯಕ್ಷ ಅಂದಾನಿಗೌಡ, ಯೋಗಗುರು ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ಜಾನಪದ ಪರಿಷತ್ ಮಂಡ್ಯ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 24 ಕವಿಗಳು ತಮ್ಮ ಸ್ವ ರಚಿತ ಕವನಗಳನ್ನು ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net