ಕವಿಮನಗಳಿಗೆ ಪುತಿನ ಇಂದಿಗೂ ಪ್ರೇರಣೆ: ಕಸಾಪ ಮೈಸೂರು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಭಿಮತ

Melkote
Published on

ಮೇಲುಕೋಟೆ: ಕವಿ ಪು.ತಿ.ನ ಪ್ರಾತಸ್ಮರಣೀಯರಾಗಿದ್ದು, ಹಲವಾರು ಕವಿಮನಗಳಿಗೆ ಇಂದಿಗೂ ಪ್ರೇರಣೆಯಾಗಿದ್ದಾರೆ ಎಂದು ಕನ್ನಡ ಸಾಹಿತ ್ಯ ಪರಿಷತ್‌ನ ಮೈಸೂರು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಭಿಪ್ರಾಯಪಟ್ಟರು.
ಪುತಿನ ಸ್ಮರಣಾರ್ಥ ಇಲ್ಲಿನ ವಂಗೀಪುರಂ ಮಠದಲ್ಲಿ ಆಯೋಜಿಸಿದ್ದ ಪ್ರವಾಸಿ ಕವಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಪುತಿನರಿಗೆ ಕಾವ್ಯ ರಚನೆಗೆ ಮೇಲುಕೋಟೆಯ ಪರಿಸರ ಪ್ರೇರಣೆಯಾಗಿತ್ತು. ಮರಗಿಡಗಳು, ಕಲ್ಲುಬಂಡೆಗಳು ಕವಿತೆ ರಚನೆಗೆ ಪ್ರೇರಕ ಶಕ್ತಿಯಾಗಿದ್ದವು. ಇಂತಹ ಪರಿಸರ ಎಲ್ಲ ಕವಿಮನಗಳಿಗೆ ಸ್ಫೂರ್ತಿಯ ವಾತಾವರಣ ನಿರ್ಮಿಸಿಕೊಡುತ್ತದೆ ಎಂದರು.
ಸಮಾರಂಭವನ್ನು ಸಮಾಜ ಸೇವಕ ಡಾ.ಕೆ.ರಘುರಾಂ ಉದ್ಘಾಟಿಸಿದರು. ವಂಗೀಪುರಂಮಠದ ಶ್ರೀ ಇಳೆಯಾಳ್ವಾರ್ ಸ್ವಾಮೀಜಿ ಮಾತನಾಡಿದರು. ಕಸಾಪ ಸದಸ್ಯೆ ಮ.ನ.ಲತಾ, ಭರತನಾಟ್ಯ ಕಲಾವಿದ ಡಿ.ಕೇಶವ್, ಹಿರಿಯ ಕವಿ ಜಯಪ್ಪ ಹೊನ್ನಾಳಿ ಇತರರಿದ್ದರು. ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಕವಿಗಳಿಗೆ ಮೇಲುಕೋಟೆಯ ವಿಶಿಷ್ಠ ಖಾದ್ಯಗಳಾದ ಕ್ಷೀರಾನ್ನ, ಕ್ಷೀರಾ, ಪುಳಿಯೊಗರೆ ಉಣ ಬಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net