ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ

15mdk06
Published on

ಮಡಿಕೇರಿ:

ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಖಿಲ ಭಾರತ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯಲ್ಲಿ ಸೋಮವಾರ ಕವನ ವಾಚನ ಕಾರ್ಯಕ್ರಮ ನಡೆಯಿತು. ಸಾಹಿತಿ ಕಸ್ತೂರಿ ಗೋವಿಂದಮಯ್ಯ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಆನಂದತೀರ್ಥ ಭಾರದ್ವಾಜ ತೀರ್ಪುಗಾರಿಕೆಯಲ್ಲಿ ಜಿಲ್ಲೆಯ ಹಿರಿಯ ಕಿರಿಯ ಸಾಹಿತಿಗಳು ಮತ್ತು ಯುವ ಬರಹಗಾರರು ಕವನ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ವರಾಜ್ಯ ಸುರಾಜ್ಯ ಶೀರ್ಷಿಕೆ ಅಡಿಯಲ್ಲಿ ಕವಿಗಳು ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು. ತೀರ್ಪುಗಾರರ ಮೆಚ್ಚುಗೆ ಪಡೆದ ಗಿರೀಶ್ ಕಿಗ್ಗಾಲು, ಸಂಗೀತ ರವಿರಾಜ್ ಹಾಗೂ ಲೀಲಾ ದಾಮೋದರ್ ಅವರ ಮೂರುರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತು ಕೊಡಗು ಘಟಕದ ಅಧ್ಯಕ್ಷ ಕುಶ್ವಂತ್ ಕೋಳಿಬೈಲು, ಕಾರ್ಯದರ್ಶಿ ಬಬ್ಬಿರ ಸರಸ್ವತಿ, ಖಜಾಂಚಿ ಹೇಮಂತ್ ಪಾರೇರಾ, ಮೊಣ್ಣಂಡ ಶೋಭಾ ಸುಬ್ಬಯ್ಯ, ಪಟ್ಟಡ ದೀಕ್ಷಿತ್, ವಿನೋದ್ ಮೂಡಗದ್ದೆ ಹಾಗೂ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇದ್ದರು.

ಆನಂದತೀರ್ಥ ಕೆ. ಭಾರದ್ವಾಜ ಕವನಗಳ ವಿಮರ್ಶೆಯ ಜತೆಗೆ ಸ್ವಾತಂತ್ಯೋತ್ಸವದ ನಿಜ ಅರ್ಥವನ್ನು ಸಾದರಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net