ಕವಿತೆಗಳ ಮಳೆ - ಹೀಗೊಂದು ವಿನೂತನ ಕವಿಗೋಷ್ಠಿ

16mdk02 smitha
Published on

ಮಡಿಕೇರಿ:

ಅಖಿಲ ಭಾರತ ಸಾಹಿತ್ಯ ಪರಿಷದ್ ವತಿಯಿಂದ ಮಡಿಕೇರಿಯ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಭಾನುವಾರ (ಜೂ.೧೮) ಸಂಜೆ ಕವಿಗೋಷ್ಠಿ ಆಯೋಜಿಸಲಾಗಿದೆ. "ಕವಿತೆಗಳ ಮಳೆ" ಹೆಸರಿನಲ್ಲಿ ಅಯೋಜಿಸುತ್ತಿರುವ ಈ ಕವಿ ಗೋಷ್ಠಿಯಲ್ಲಿ ಮಳೆಯ ಕುರಿತಂತೆ ಬರೆದ ಕವಿತೆಗಳನ್ನು ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಕವಿಗಳು ವಾಚಿಸಲಿದ್ದಾರೆ. ಸಂಜೆ ಮೂರರಿಂದ ಐದು ಗಂಟೆಯ ಅವಧಿಯಲ್ಲಿ ನಡೆಯುವ ಈ ಕವಿಗೋಷ್ಠಿಯನ್ನು ಅ.ಭಾ.ಸ.ಪ ವಿಭಾಗ ಸಂಯೋಜಕ ಸುಂದರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕನ್ನಡ ಕಾವ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕೊಡಗಿನ ಖ್ಯಾತ ಕವಯತ್ರಿ ಸ್ಮಿತಾ ಅಮೃತರಾಜ್ ಅವರ ಜೊತೆಗೆ ಕವಿತೆಗಳ ಕುರಿತಾದ ಸಂವಾದವೂ ಕಾರ್ಯಕ್ರಮದ ಕೊನೆಗೆ ನಡೆಯಲಿದೆ ಎಂದು ಅಖಿಲ ಭಾರತ ಸಾಹಿತ್ಯ ಪರಿಷದ್ ಕೊಡಗು ಘಟಕದ ಅಧ್ಯಕ್ಷ ಮೇ. ಡಾ ಕುಶ್ವಂತ್ ಕೋಳಿಬೈಲು ಮತ್ತು ಜಿಲ್ಲಾ ಕಾರ್ಯದರ್ಶಿ ಬಬ್ಬೀರ ಸರಸ್ವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net