

ಮಂಡ್ಯ: ಕಲೆ, ಸಂಸ್ಕೃತಿಯ ತವರಾದ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರ ಕೊರತೆ ಇದೆ ಎಂದು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ವಿಷಾದಿಸಿದರು.
ನಗರದ ಕರ್ನಾಟಕ ಸಂದ ಕೆ.ವಿ.ಶಂಕರಗೌಡ ಶತವಾನೋತ್ಸವ ಭವನದಲ್ಲಿ ಭಾನುವಾರ ಡಾ.ಜೀ.ಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕಷ್ಣರಾಜ ಒಡೆಯರ್ ಯುವಸೇನೆ, ಶಂಭು ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ 29ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳ, ಅಮೃತ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸವಾರಂಭದಲ್ಲಿ ವಾತನಾಡಿದರು.
ಮಂಡ್ಯ ಸಾಂಸ್ಕೃತಿಕವಾಗಿ ರಾಷ್ಟ್ರ ಮಟ್ಟದಲ್ಲಿ ಹೆಸರು ವಾಡಿದೆ. ಇಂತಹ ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರ ಕೊರತೆ ಬಹು ದೊಡ್ಡದಾಗಿದೆ. ಸಾಹಿತ್ಯ, ನೃತ್ಯ, ಸಂಗೀತೋತ್ಸವ, ಶಾಸ್ತ್ರೀಯ ಸಂಗೀತೋತ್ಸವ, ಗಾಯನದಂತಹ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಕಾರ್ಯಕ್ರಮ ಆಯೋಜಕರು ಮುಂದಾಗಬೇಕು. ಈ ಮೂಲಕ ಪ್ರತಿಭೆಗಳಲ್ಲಿರುವ ಕಲೆ ಹೊರಬರಬೇಕೆಂದು ಸಲಹೆ ನೀಡಿದರು.
ಮನುಷ್ಯನಿಗೆ ಸಾಹಿತ್ಯ ಬಹುಮುಖ್ಯ. ಅನೇಕ ಸಾಹಿತಿಗಳು ರಚಿಸಿರುವ ಕಥೆಗಳು, ಸಿನಿವಾ, ಧಾರಾವಾಹಿ, ನಾಟಕಗಳಾಗಿವೆ. ಅವುಗಳಲ್ಲಿ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಆದರೆ ನಾವುಗಳು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟದನ್ನು ಕೈಬಿಡಬೇಕು ಎಂದ ಅವರು, ಮನ್‌ಮುಲ್ ವತಿಯಿಂದ ಆರ್ಗ್ಯಾನಿಕ್ ಬೆಲ್ಲದ ಬರ್ಫಿ ಮತ್ತು ಖೋವಾದಿಂದ ವಾಡಲ್ಪಟ್ಟ ಲಾಡನ್ನು ಬಿಡುಗಡೆ ಮಾಡಲಾಗಿದೆ. ಗ್ರಾಹಕರು ಇವುಗಳನ್ನು ಖರೀದಿಸಬೇಕು. ಇದರಿಂದ ಮಂಡ್ಯ ರೈತರಿಗೆ ಅನುಕೂಲವಾಗುತ್ತದೆ. ಇನ್ನು ಕಾರ್ಯಕ್ರಮಗಳಲ್ಲಿ ಮಣಿ ಹಾರಗಳನ್ನು ತೊರೆದು ರೈತರು ಉತ್ಪಾದಿಸುವ ಹೂವಿನ ಹಾರಗಳನ್ನು ಬಳಸಿ. ಇದರಿಂದ ರೈತರಿಗೂ ಸಹ ಅನುಕೂಲವಾಗಲಿದೆ ಎಂದು ಮನವಿ ವಾಡಿದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ವಾದೇಗೌಡ, ಕವಯತ್ರಿ ಡಾ.ರತ್ನಾ, ಕಸಾಪ ಮಾಜಿ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ, ಜೀ.ಶಂ.ಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್ ಇತರರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 20ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.