ಕಾವೇರಿ ಸಿದ್ರಾಮಪ್ಪ ಸಣ್ಣಳ್ಳಿ ನಿಧನ

IMG-20241005-WA0005
Published on

ಇಂದು ಯಡ್ರಾಮಿಯಲ್ಲಿ ಅಂತ್ಯಕ್ರಿಯೆ

ಕಲಬುರಗಿ : ಜಿಲ್ಲೆಯ ಯಡ್ರಾಮಿ ಪಟ್ಟಣದ ಕಾವೇರಿ ಸಿದ್ರಾಮಪ್ಪ ಸಣ್ಣಳ್ಳಿ (೫೫) ಶುಕ್ರವಾರ ಹೃದಯಾಘಾತಕ್ಕೊಳಗಾಗಿ ನಿಧನರಾದರು. ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಪತಿ ಸಿಂದಗಿಯ ಆರ್.ಡಿ.ಪಾಟೀಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಉದ್ಯಮಿ ಸಿದ್ರಾಮಪ್ಪ ಸಣ್ಣಳ್ಳಿ, ಇಬ್ಬರು ಪುತ್ರಿಯರು,ಸಹೋದರರು ಹಾಗೂ ಬಂಧುಗಳನ್ನು ಅಗಲಿದ್ದಾರೆ.ಸಿಂದಗಿಯಲ್ಲಿ ನೆಲೆಸಿದ್ದ ಕಾವೇರಿ ಅವರು ಜೇವರ್ಗಿ ತಾಪಂ ಮಾಜಿ ಅಧ್ಯಕ್ಷ ಶಿವಾನಂದ ಮಾಕಾ ಅವರ ಹಿರಿಯ ಸಹೋದರಿ. ಶನಿವಾರ ಮಧ್ಯಾಹ್ನ ೧೨ ಗಂಟೆ ಸ್ವಗ್ರಾಮ ಯಡ್ರಾಮಿಯಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net