ಜಿಲ್ಲೆಯ ಕೆಲವೆಡೆ ಕಾವೇರಿ ಕಾವು

kaveri protest
bangalore bandh relate protest at doddaballapura
Published on

ದೊಡ್ಡಬಳ್ಳಾಪುರ ಟೋಲ್‌ನಲ್ಲಿ ಕರವೇ ರಸ್ತೆ ತಡೆ

ವಿಜಯಪುರದಲ್ಲಿ ದರ್ಶನ್ ಅಭಿಮಾನಿಗಳ ಸಂಘ ಪ್ರತಿಭಟನೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಾವೇರಿ ನೀರಿನ ಹೋರಾಟಕ್ಕೆ ರಾಜಧಾನಿಯಲ್ಲಿ ಕರೆ ನೀಡಿದ್ದ ಬಂದ್ ಜಿಲ್ಲೆಯಲ್ಲಿ ಅಷ್ಟೇನು ಪರಿಣಾಮ ಬೀರದಿದ್ದರೂ ಕೆಲವೆಡೆ ಮಾತ್ರ ಪ್ರತಿಭಟನೆ ಕಾವು ಕಾಣಿಸಿಕೊಂಡಿತು.
ಕರವೇ, ನಟ ದರ್ಶನ್ ಅಭಿಮಾನಿಗಳ ಸಂಘ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ಮೂಲಕ ಕಾವೇರಿ ಹಕ್ಕಿಗಾಗಿ ೋಷಣೆ ಕೂಗಿದರು. ಜಿಲ್ಲೆಯಲ್ಲಿ ಜನಜೀವನ ಸಹಜವಾಗಿತ್ತು. ಬೆಳಗ್ಗೆ ಬೆಂಗಳೂರಿನಿಂದ ಜಿಲ್ಲೆಗೆ ಬರುವ ಸಾರಿಗೆ ಬಸ್‌ಗಳ ಸಂಚಾರ ವಿರಳವಾಗಿತ್ತು. ಜಿಲ್ಲಾಡಳಿತಭವನ ಸೇರಿ ತಾಲೂಕು ಕಚೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಗೈರುಹಾಜರಾಗಿದ್ದು ಕಂಡುಬಂತು. ರಾಜಧಾನಿಯ ಗಡಿಹಂಚಿಕೊಂಡಿರುವುದರಿಂದ ಜಿಲ್ಲಾ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲೆಯ ಕೆಲವೊಂದು ಖಾಸಗಿ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ೋಷಿಸಲಾಗಿತ್ತು. ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ದೊಡ್ಡಬಳ್ಳಾಪುರದಲ್ಲಿ ಕರವೇಯಿಂದ ಧಿಕ್ಕಾರ ಬೆಂಗಳೂರು ಬಂದ್‌ಗೆ ಕರವೇ ಕನ್ನಡಿಗರ ಬಣ ಬೆಂಬಲ ಸೂಚಿಸಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಿತು. ಬೆಂಗಳೂರು - ಹಿಂದೂಪುರ ರಾಜ್ಯ ಹೆದ್ದಾರಿಯ ಮಾರಸಂದ್ರ ಟೋಲ್‌ನಲ್ಲಿ ರಸ್ತೆ ತಡೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎಂದು ಧಿಕ್ಕಾರ ಕೂಗಿದರು. ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿಎಸ್ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ದ್ವಂದ್ವ ನಿಲುವು ಪ್ರದರ್ಶನ ಮಾಡುತ್ತಿದೆ. ಕಾವೇರಿ ನೀರು ನಿರ್ಹಹಣಾ ಪ್ರಾಧಿಕಾರ ಸೇರಿ ಜಲ ತಜ್ಞರನ್ನು ಎರಡು ರಾಜ್ಯಗಳಿಗೆ ಕಳುಹಿಸಿ ಖುದ್ದು ಸಮೀಕ್ಷೆ ಮಾಡುವ ಮೂಲಕ ತೀರ್ಮಾನ ಕೈಗೊಳ್ಳಬೇಕಿತ್ತು. ದೆಹಲಿಯಲ್ಲಿ ಕೂತು ನಿರ್ಧಾರಗಳನ್ನು ತೆಗೆದುಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರು.

ಸರ್ಕಾರದಿಂದ ರೈತರಿಗೆ ದ್ರೋಹ: ವಿಜಯಪುರದ ಅಂಕತಟ್ಟಿ ನಂಜುಂಡಪ್ಪ ಸರ್ಕಲ್‌ನಲ್ಲಿ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಚಕ್ರವರ್ತಿ ದರ್ಶನ್ ಅಭಿಮಾನಿಗಳ ಸಂಘದ ಸದಸ್ಯರು ಪ್ರತಿಭಟಿಸಿದರು. ಸಂಘದ ಅಧ್ಯಕ್ಷ ಕಿರಣ್ ಮಾತನಾಡಿ, ಕಾವೇರಿ ಮತ್ತು ಕಬಿನಿ ಜಲಾಶಯದ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ದ್ರೋಹ ಮಾಡಿದೆ. ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇದ್ದರೂ ನೀರು ಬಿಡುಗಡೆ ಮಾಡುತ್ತಿದ್ದು, ಇದು ರಾಜಕೀಯ ಕುತಂತ್ರವಾಗಿದೆ. ರಾಜಕೀಯ ಬೇಳೆ ಬೇಯಿಕೊಳ್ಳಲು ರೈತರನ್ನು ಬಲಿ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯವಹಿಸಿದೆ, ಕಾವೇರಿ ನಿಯಂತ್ರಣ ಸಮಿತಿ, ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾಸ್ತವ ವಿಚಾರ ಮಂಡನೆ ಮಾಡುವಲ್ಲಿ ವಿಫಲವಾಗಿದೆ ಎಂದು ಸಂಘದ ಉಪಾಧ್ಯಕ್ಷ ಮದನ್ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net