ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ 15ನೇ ವಾರ್ಷಿಕೋತ್ಸವ

25
Published on

ಮೈಸೂರು: ನಗರದ ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ 15ನೇ ವಾರ್ಷಿಕೋತ್ಸವಕ್ಕೆ ಆಸ್ಪತ್ರೆಯ ಡಾ.ಜಿ.ಆರ್.ಚಂದ್ರಶೇಖರ್ ಇತ್ತೀಚೆಗೆ ಚಾಲನೆ ನೀಡಿದರು.
ಹದಿನೈದು ವರ್ಷಗಳ ಹಿಂದೆ ಫೆ.14ರಂದೇ ಜನರಿಗೆ ಉತ್ತಮ ಆರೋಗ್ಯ ಸಿಗಬೇಕು ಎನ್ನುವ ಉದ್ದೇಶದಿಂದ ಆಸ್ಪತ್ರೆಯನ್ನು ಆರಂಭಿಸಿದ್ದು, ಇದುವರೆಗೆ ಸುಮಾರು 25000ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆಗಳು, 22000ಕ್ಕೂ ಅಧಿಕ ಆಂಜಿಯೋಪ್ಲಾಸ್ಟಿ ಮತ್ತು 3000ಕ್ಕೂ ಹೆಚ್ಚು ಕಾರ್ಡಿಯೋ ಥೋರಾಸಿಕ್ ಸರ್ಜರಿಗಳನ್ನು ನಿರ್ವಹಿಸುವ ಮೂಲಕ ಜನರಿಗೆ ಆರೋಗ್ಯ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ(ಎನ್‌ಎಬಿಎಚ್) ಮತ್ತು ಡಿಎನ್‌ಬಿ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, 200 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಟೆರಿಶರಿ ಕೇರ್ ಆಸ್ಪತ್ರೆ ಇದ್ದಾಗಿದೆ. ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಎಸಿಎಲ್ಎಸ್ ಮತ್ತು ಬಿಸಿಎಲ್ಎಸ್ ಕೋರ್ಸ್‌ಗಳನ್ನು ನಡೆಸಲು ಮೈಸೂರಿನ ಏಕೈಕ ಮಾನ್ಯತೆ ಪಡೆದ ಆಸ್ಪತ್ರೆಯಾಗಿದ್ದು, ಇದರ ಮೂಲಕ ನಗರದ ವಿವಿಧ ಆಸ್ಪತ್ರೆಗಳಿಂದ 80ಕ್ಕೂ ಅಧಿಕ ಸ್ನಾತಕೋತ್ತರ ವೈದ್ಯಕೀಯ ಪದವೀಧರರು (ಪಿಜಿ) ಪ್ರಯೋಜನವನ್ನು ಪಡೆದಿದ್ದಾರೆ. ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಗುಣಮಟ್ಟದ ಮ್ಯಾನಿಕಿನ್‌ಗಳು ಮತ್ತು ಆಧುನಿಕ ಸಿಮ್ಯುಲೇಟರ್‌ಗಳ ಕುರಿತು ತರಬೇತಿ ನೀಡಲಾಗುತ್ತಿದೆ ಎಂದರು.
ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಬಿ.ಸಿ.ವಿಜಯಲಕ್ಷ್ಮೀ, ಕಾವೇರಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರಶೇಖರ್, ಆಸ್ಪತ್ರೆಯ ಡಾ.ಆರ್.ವೈದ್ಯನಾಥನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net