ಅ.17ರಂದು ಕಾವೇರಿ ನಡ್ಪುವಿನಲ್ಲಿ ಸ್ವಚ್ಛತೆ ಕಾಪಾಡಲು ಮನವಿ

kaveri
Published on

ಮಡಿಕೇರಿ:

ಈ ತಿಂಗಳ 17ರಂದು ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಸಂಭವಿಸುತ್ತಿರುವ ತೀರ್ಥೋದ್ಭವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9.30ಕ್ಕೆ ಭಾಗಮಂಡಲದಿAದ ಪಾದಯಾತ್ರೆ ಕಾವೇರಿ ನಡ್ಪು ಆರಂಭವಾಗಲಿದ್ದು ಭಕ್ತರು ಸ್ವಚ್ಚತೆ ಕಾಪಾಡಲು ಅಖಿಲ ಕೊಡವ ಸಮಾಜದ ವತಿಯಿಂದ ಮನವಿ ಮಾಡಲಾಗಿದೆ.

ಕುಲಮಾತೆ ಕಾವೇರಿ ತೀರ್ಥೋದ್ಭವ ಸಂಧರ್ಭದಲ್ಲಿ ತಾಯಿಯನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲು ಕೊಡವ ಮತ್ತು ಭಾಷಿಕ ಸಮುದಾಯದ ಭಕ್ತಾಧಿಗಳು ಭಾಗಮಂಡಲದಿAದ ತಲಕಾವೇರಿಗೆ ಪಾದಯಾತ್ರೆಯಲ್ಲಿ ತೆರಳುವುದು ವಾಡಿಕೆ. ಅದರಂತೆ ಈ ಬಾರಿ ಅಕ್ಟೋಬರ್ 17ನೇ ಶುಕ್ರವಾರದಂದು ಪಾದಯಾತ್ರೆ (ನಡ್ಪು) ಯಲ್ಲಿ ಭಾಗವಹಿಸಲಿಚ್ಛಿಸುವ ಭಕ್ತಾಧಿಗಳು ಅ.17ರಂದು ಬೆಳಗ್ಗೆ 9 ಘಂಟೆಗೆ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಸೇರುವಂತೆ ಮತ್ತು ಅಲ್ಲಿಂದ 9.30 ಘಂಟೆಗೆ ಅಖಿಲ ಕೊಡವ ಸಮಾಜದ ಸೂಚನೆಯ ಮೇರೆಗೆ ಎಲ್ಲರೂ ಒಟ್ಟಾಗಿ ಪಾದಯಾತ್ರೆ ಪ್ರಾರಂಭ ಮಾಡುವಂತೆ ತೀರ್ಮಾನಿಸಲಾಗಿದೆ.

ಈ ಸಂಬAಧ ಗುರುವಾರ (ಅ.9) ಅಖಿಲ ಕೊಡವ ಸಮಾಜ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಕೊಡವ ಸಂಘಟನೆಗಳು ಭಾಗವಹಿಸಿ ಅಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ, ತೀರ್ಥೋದ್ಭವದಂದು ನಡ್ಪುಗೆ ಬರುವ ಎಲ್ಲಾ ಭಕ್ತಾದಿಗಳು ಒಗ್ಗಟ್ಟಾಗಿ ನಡೆಯಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.

ನಡ್ಪುನಲ್ಲಿ ಎಲ್ಲಾ ತಂಡ ಗಳಿಗೆ ಸಾಂಪ್ರದಾಯಕ ದುಡಿ ಕೊಟ್ಟ್ ಪಾಟ್ ಮತ್ತು ತಳಿಯತಕ್ಕಿ ಬೊಳ್ಚಕ್ಕೆ ಅವಕಾಶವಿದ್ದು, ಕುಂಡಿಕೆಯ ಬಳಿಗೆ ಹೋಗಲು ಒಂದು ತಂಡಕ್ಕೆ ಅನುಮತಿ ನೀಡಲಾಗಿದೆ. ನಡ್ಪು ನಡೆಯುವ ದಾರಿಯುದ್ದಕ್ಕೂ ಶಿಸ್ತು ಪಾಲನೆ ಮಾಡಬೇಕಿದ್ದು, ಸ್ವಚ್ಚತೆಗೆ ಆದ್ಯತೆ ಕೊಡಬೇಕಾಗಿದೆ. ಯಾವುದೇ ವಾಹನ ಮತ್ತು ಇತರ ಭಕ್ತಾಧಿಗಳಿಗೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದ್ದು ಪವಿತ್ರ ತೀರ್ಥ ಕುಂಡಿಕೆಯಿAಧ ತೀರ್ಥ ಸ್ವೀಕರಿಸುವವರು ಕಡ್ಡಾಯವಾಗಿ ಗಾಜಿನ ಬಾಟಲ್, ಪ್ಲಾಸ್ಟಿಕ್ ಕ್ಯಾನ್, ಬಿಂದಿಗೆಗಳನ್ನು ತರಬಾರದೆಂದು ಅಖಿಲ ಕೊಡವ ಸಮಾಜಧ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net