

ಕಿನ್ನಿಗೋಳಿ: ಕವತ್ತಾರು ಸಿರಿ ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕವತ್ತಾರು ಆದಿ ಆಲಡೆ ಶ್ರೀ ದೇಗುಲದ ಸಮಗ್ರ ಜೀರ್ಣೋದ್ಧಾರ ಅಂಗವಾಗಿ ಸಮಾಲೋಚನಾ ಸಭೆಯು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಳಕುಂಜ ಗುತ್ತು ಮಲ್ಲಿಕಾ ಯಶವಂತ ಶೆಟ್ಟಿ ಉಪಸ್ಥಿತಿಯಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ನೀನಾ ನಿತ್ಯಾನಂದ ಅಜಿಲರ ಮನೆಯಲ್ಲಿ ನಡೆಯಿತು.
ಗೌರವಾಧ್ಯಕ್ಷ ವಿರಾರ್ ಶಂಕರ ಶೆಟ್ಟಿ ಮಾತನಾಡಿ, ಶ್ರೀ ಕ್ಷೇತ್ರ ಕವತ್ತಾರು ಅತ್ಯಂತ ಕಾರಣಿಕದ ಕ್ಷೇತ್ರವಾಗಿದ್ದು, ಜೀರ್ಣೋದ್ದಾರ ಕಾರ್ಯ ಅಗತ್ಯವಾಗಿದ್ದು, ಭಕ್ತರು ಇದಕ್ಕೆ ಕೈಜೋಡಿಸಬೇಕು ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುರಾಜ ಭಟ್ ಮಾಹಿತಿ ನೀಡಿ 400 ವರ್ಷಗಳ ಪುರಾತನವಾಗಿದ್ದ ದೇವಸ್ಥಾನ ಜೀರ್ಣೋದ್ಧಾರ ನಡೆಯಲಿದೆ. ಮಹಾಲಿಂಗೇಶ್ವರ ಹಾಗೂ ಪರಿವಾರ ದೇವರ ಗುಡಿ ಮಾಡಗಳು ಪುನರ್ ನಿರ್ಮಾಣ ಮಾಡಬೇಕಾಗಿದೆ. ಸುಮಾರು 10 ಕೋಟಿ ರೂ. ಯೋಜನೆ ಇದಾಗಿದ್ದು, ಸೋಮವಾರದಿಂದ ಜೀರ್ಣೋದ್ಧಾರ ಪ್ರಕ್ರಿಯ ನಡೆಯಲಿದೆ. ದೇವಸ್ಥಾನದಲ್ಲಿ ಪರಿವಾರ ದೇವರ ಸಂಕೋಚ ಹೋಮಹವನಗಳು ನಡೆಯಲಿವೆ ಎಂದರು. ನಿತ್ಯಾನಂದ ಅಜಿಲರು ಮಾರ್ಗಸೂಚಿಗಳನ್ನು ನೀಡಿದರು. ಪುತ್ತೂರುಬಾವ ಮೋಹನ್ ಶೆಟ್ಟಿ, ಅಶೋಕ್ ಶೆಟ್ಟಿ, ಸಮಿತಿ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಬಳ್ಕುಂಜೆ ಉಪಸ್ಥಿತರಿದ್ದರು.
ದಿನಕರ ಶೆಟ್ಟಿ ಬಳ್ಕುಂಜೆ ಸ್ವಾಗತಿಸಿದರು. ದೇವಿಪ್ರಸಾದ್ ಅಜಿಲ ವಂದಿಸಿದರು.