ಅಹಿತಕರ ಘಟನೆ ನಡೆಯದಿರಲಿ

Published on

ಕವಲೂರು: ಹಬ್ಬ-ಹರಿದಿನಗಳು ಜನರ ಸಂತೋಷ ಹೆಚ್ಚಿಸಿ, ಒಗ್ಗಟ್ಟಿನ ಮನೋಭಾವ ಮೂಡಿಸುತ್ತವೆ. ಆದ್ದರಿಂದ ಹಬ್ಬಗಳನ್ನು ಪ್ರೀತಿ, ಸೌಹಾರ್ದ ಭಾವದಿಂದ ಆಚರಿಸಿ ಎಂದು ಪಿಎಸ್‌ಐ ಪ್ರಹ್ಲಾದ ನಾಯಕ ತಿಳಿಸಿದರು.

ಗ್ರಾಮದಲ್ಲಿ ಅಳವಂಡಿ ಪೊಲೀಸ್ ಠಾಣೆ ಹಾಗೂ ಗ್ರಾಪಂನಿಂದ ಗಣೇಶ ಚತುರ್ಥಿ, ಈದ್ ಮಿಲಾದ್ ಆಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಶಾಂತಿ, ಎಸ್‌ಸಿ-ಎಸ್‌ಟಿ ಕುಂದು ಕೊರತೆ ಹಾಗೂ ಮಾಹಿತಿ ಸಭೆಯಲ್ಲಿ ಮಾತನಾಡಿದರು.

ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಿ. ಜಾತಿ ಬೇಧ ಎಣಿಸದೇ ಸರ್ವರೂ ಸೌಹಾರ್ದದಿಂದ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡಬಾರದು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಹಬ್ಬಗಳನ್ನು ಆಚರಿಸಬೇಕು. ಗಲಭೆ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದರು.

ಪಿಡಿಒ ಅನಿತಾ ಕಿಲ್ಲೇದ ಪ್ರಮುಖರಾದ ಮುತ್ತಣ್ಣ ಬಿಸರಳ್ಳಿ, ಬದ್ರುದ್ದೀನ್ ಮಕಾಂದಾರ, ಲಕ್ಷ್ಮಣ ಗುಡಿ, ವಿಜಯ ಘಟ್ರಡ್ಯಾಳ, ಸಿದ್ದಪ್ಪ ತುರಕಾಣಿ, ವಿರೂಪಾಕ್ಷಿ ಬಂಡಿ, ರವಿಪ್ರಸಾದ, ಲಿಂಗರಾಜ, ಮಾಯಪ್ಪ ಗುಗ್ರಿ, ಉಮೇಶ ವಡ್ಡರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net