ಸರ್ವರೂ ಕಾನೂನು ಗೌರವಿಸಲಿ

peace meeting
ಕವಲೂರಿನಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಪ್ರಹ್ಲಾದ ನಾಯಕ ಮಾತನಾಡಿದರು. ಪ್ರಮುಖರಾದ ಮಹಾಂತೇಶ, ಹನುಮಂತ, ಹೊನ್ನಕೆರಪ್ಪ, ತಿಮ್ಮಣ್ಣ, ಮುತ್ತಣ್ಣ, ಯಂಕಪ್ಪ, ಮಲ್ಲೇಶಪ್ಪ ಇತರರಿದ್ದರು.
Published on

ಕವಲೂರು: ಜಾತ್ರೆ, ಹಬ್ಬ-ಹರಿದಿನ, ಧಾರ್ಮಿಕ ಕಾರ್ಯಕ್ರಮಗಳು ಜನರ ಮನಸ್ಸನ್ನು ಉಲ್ಲಾಸದಿಂದ ಇರಿಸಲು ಹಾಗೂ ಒಗ್ಗಟ್ಟಿನಿಂದ ಇರಲು ನೆರವಾಗುತ್ತವೆ ಎಂದು ಪಿಎಸ್‌ಐ ಪ್ರಹ್ಲಾದ ನಾಯಕ ತಿಳಿಸಿದರು.

ಗ್ರಾಮದಲ್ಲಿ ಮೇ ನಲ್ಲಿ ನಡೆಯುವ ಶ್ರೀ ದುರ್ಗಾದೇವಿ ಜಾತ್ರೆ, ಶ್ರೀ ಉಜ್ಜಿನಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಅಂಗವಾಗಿ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಶಾಂತಿ ಸಭೆ ಉದ್ದೇಶಿಸಿ ಭಾನುವಾರ ಮಾತನಾಡಿದರು.

ಸಾರ್ವಜನಿಕರು ಸೌಹಾರ್ದತೆ, ಶಾಂತಿಯಿಂದ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸರ್ವರೂ ಕಾನೂನನ್ನು ಗೌರವಿಸಬೇಕು ಎಂದರು. ಪ್ರಮುಖರಾದ ತಿಮ್ಮಣ್ಣ ಸಿದ್ನೆಕೊಪ್ಪ, ಯಂಕಪ್ಪ ಹಳ್ಳಿ, ಶರಣಪ್ಪ ಯರಾಶಿ, ನಾಗರಾಜ ಹಕ್ಕಂಡಿ, ಶಿವಪ್ಪ ಮುಕ್ಕಣ್ಣವರ, ಎಚ್.ಸಿ. ಮಲ್ಲೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net