ಕಿಡಿಗೇಡಿಗಳಿಂದ ಬೆಳೆನಾಶ

crop destruction due to pests
ಕವಲೂರು ಗ್ರಾಮದ ರೈತ ಮೈಲಪ್ಪ ಪೂಜಾರ ಅವರ ಮೆಕ್ಕೆಜೋಳ ಬೆಳೆಯನ್ನು ಕಿಡಿಗೇಡಿಗಳು ಕಡಿದು ನಾಶ ಮಾಡಿರುವುದು.
Published on

ಕವಲೂರು: ಗ್ರಾಮದ ರೈತ ಮೈಲಪ್ಪ ಪೂಜಾರ ಅವರ ಮೆಕ್ಕೆಜೋಳ ಬೆಳೆಯನ್ನು ಕಿಡಿಗೇಡಿಗಳು ಕಡಿದು ನಾಶ ಮಾಡಿ ನಷ್ಟ ಉಂಟು ಮಾಡಿದ್ದಾರೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದು, ಕೆಲವೇ ದಿನಗಳಲ್ಲಿ ಕಟಾವಿಗೆ ಬರುವ ಹಂತದಲ್ಲಿ ಇತ್ತು. ಸದ್ಯ ಕಾಳು ಕಟ್ಟುವ ಹಂತದಲ್ಲಿದ್ದ ಆಳೆತ್ತರ ಬೆಳೆಯನ್ನು ನಾಶ ಮಾಡಲಾಗಿದ್ದು, ಇದು ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕವಲೂರು ಸೀಮಾದ 1341/2 ಸ.ನಂ.ನ 4.03 ಗುಂಟೆ ಜಮಿನಿನಲ್ಲಿ ಬೆಳೆ ನಾಶ ಮಾಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ರೈತನಿಗಾದ ನಷ್ಟ ಭರಿಸುವ ಜತೆಗೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net