ಕ್ರೀಡೆಯಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ

Published on

ಕವಲೂರು: ಕ್ರೀಡೆಯಿಂದ ಮನಸ್ಸು ಹಾಗೂ ದೇಹ ಸದೃಢವಾಗಲಿದೆ ಎಂದು ಡಿವೈಎಸ್‌ಪಿ ಯಶ್ವಂತಕುಮಾರ ತಿಳಿಸಿದರು.

ಗ್ರಾಮದಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಿಇಒ, ಬಿಆರ್‌ಸಿ ವತಿಯಿಂದ ಸರ್ಕಾರಿ ಮಾದರಿ ಹಿರಿಯ, ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕವಲೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಲಿದೆ. ಸೋಲು ಗೆಲುವನ್ನು ಲೆಕ್ಕಿಸದೆ ಉತ್ತಮವಾಗಿ ಆಡಿ. ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿ ಎಂದರು.

ತಾಲೂಕು ಕುರುಬರ ಸಮಾಜದ ಉಪಾಧ್ಯಕ್ಷ ಭರಮಪ್ಪ ನಗರ ಮಾತನಾಡಿ, ಕ್ರೀಡೆಗಳಿಗೆ ಜನರ ಸಹಕಾರ ಅಗತ್ಯ. ಶಿಕ್ಷಣ ಇದ್ದರೆ ಮಾತ್ರ ಜೀವನದಲ್ಲಿ ಗುರಿ ತಲುಪಲು ಸಾಧ್ಯ. ಮಕ್ಕಳು ಮೊಬೈಲ್‌ಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದರು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಿಸರಳ್ಳಿ, ಎಸ್ಡಿಎಂಸಿ ಅಧ್ಯಕ್ಷರಾದ ಮಹಾಂತೇಶ ಪಾಟೀಲ, ನಾಗರಾಜ ಕಗ್ಗಲ್, ಪ್ರಾ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ಸಿಆರ್‌ಪಿ ಇಬ್ರಾಹಿಂ, ಮುಖ್ಯ ಶಿಕ್ಷಕರಾದ ಅಂದಪ್ಪ, ಗಿರಿಯಪ್ಪ, ಪ್ರಮುಖರಾದ ವೆಂಕರಡ್ಡಿ ಇಮ್ಮಡಿ, ಗ್ಯಾನಮ್ಮ ಹಳ್ಳಿಕೇರಿ, ಹನುಮಂತ, ಹೊನ್ನಪ್ಪಗೌಡ, ಹೊನಕೇರಪ್ಪ, ನಾಗರಾಜ, ಮುತ್ತಯ್ಯ, ಸಣ್ಣಭರಮಪ್ಪ, ಕರಿಯಪ್ಪ, ತಿಮ್ಮಣ್ಣ, ಮಂಜುನಾಥ, ಬದ್ರುದ್ದೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net