

ಕುಶಾಲನಗರ:
ಕರ್ನಾಟಕ ಕಾವಲುಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ಕಾವಲುಪಡೆ ರಾಜ್ಯ ಅಧ್ಯಕ್ಷ ಎಂ. ಮೋಹನ್ ಕುಮಾರ್ ಗೌಡರ ಹುಟ್ಟು ಹಬ್ಬವನ್ನು ಗುರುವಾರ ಕುಶಾಲನಗರ ಸಮೀಪದ ಕೂಡಿಗೆ ಶಕ್ತಿ ವ್ರದ್ದಾಶ್ರಮದಲ್ಲಿ ಆಚರಣೆ ಮಾಡಲಾಯಿತು.
ಇದೇ ವೇಳೆ ದೀಪಾವಳಿ ಅಂಗವಾಗಿ ವ್ರದ್ದಶ್ರಾಮದ ನಿವಾಸಿಗಳಿಗೆ ಸಿಹ ಊಟ ನೀಡಲಾಯಿತು.
ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ, ತಾಲೂಕು ಅಧ್ಯಕ್ಷೆ ಇಂದಿರಾ, ಪಿರಿಯಪಟ್ಟಣ ತಾಲೂಕು ಕಾರ್ಯದರ್ಶಿ ಯೋಗೇಶ್, ಹಾರ್ನಳ್ಳಿ ಹೋಬಳಿ ಅಧ್ಯಕ್ಷ ಪಾಲಾಕ್ಷ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.