ನೋಂದಣಿಗೆ ಕಾವೇರಿ 2.0 ತಂತ್ರಾಂಶ ಅನುಷ್ಠಾನ

Published on

ಹಾವೇರಿ: ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಕಾವೇರಿ 2.0 ತಂತ್ರಾಂಶವನ್ನು ಉಪ ನೋಂದಣಿ ಕಚೇರಿಗಳಲ್ಲಿ ಅಳವಡಿಸುವ ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮನವಿ ಮಾಡಿದ್ದಾರೆ.
ಕಾವೇರಿ 2.0 ಜನಸ್ನೇಹಿ ತಂತ್ರಾಂಶವಾಗಿದ್ದು, ಇದರ ಅನುಷ್ಠಾನದಿಂದ ಉಪನೋಂದಣಿ ಕಚೇರಿಯಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ. ಸಾರ್ವಜನಿಕರು ವಿಳಂಬವಿಲ್ಲದೆ ತಮ್ಮ ದಸ್ತಾವೇಜುಗಳನ್ನು ನೋಂದಣಿ ಮಾಡಿಕೊಳ್ಳಲು ಸಹಕಾರಿಯಾಗಿದೆ. ಉಪನೋಂದಣಿ ಕಚೇರಿಯಿಂದ ನೀಡುವ ಇತರೆ ಸೇವೆಗಳಾದ ಋಣಭಾರ ಪತ್ರಿಕೆ, ನಕಲು ಅರ್ಜಿ, ಇತ್ಯಾದಿ ಸೇವೆಗಳನ್ನು ಸಾರ್ವಜನಿಕರು ಆನ್‌ಲೈನ್ ಮುಖಾಂತರ ಪಡೆಯಬಹುದಾಗಿದೆ. ಒಂದು ವೇಳೆ ತಾಂತ್ರಿಕ ದೋಷ ಕಂಡುಬಂದಲ್ಲಿ ಉಪನೋಂದಣಾಧಿಕಾರಿ ಹಾಗೂ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ನೋಂದಣಿ ಅಧಿಕಾರಿ ಮಹೇಶ ಪಂಡಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕುವಾರು ಜಾರಿಗೆ
ಹಿರೇಕೆರೂರ ಉಪನೋಂದಣಿ ಕಚೇರಿಯಲ್ಲಿ ಮೇ 25, ಹಾವೇರಿ ಕಚೇರಿಯಲ್ಲಿ ಮೇ 26, ಬ್ಯಾಡಗಿ ಕಚೇರಿಯಲ್ಲಿ ಮೇ 29, ಸವಣೂರ ಕಚೇರಿಯಲ್ಲಿ ಮೇ 30, ರಾಣೇಬೆನ್ನೂರ ಕಚೇರಿಯಲ್ಲಿ ಮೇ 31, ಹಾನಗಲ್ಲ ಕಚೇರಿಯಲ್ಲಿ ಜೂನ್ 1ರಂದು ಹಾಗೂ ಶಿಗ್ಗಾಂವಿ ಉಪ ನೋಂದಣಿ ಕಚೇರಿಯಲ್ಲಿ ಜೂನ್ 2ರಂದು ಕಾವೇರಿ 2.0 ತಂತ್ರಾಂಶ ಅನುಷ್ಠಾನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net