ಕಾಲೇಜು ಹಂತದಲ್ಲೇ ಕೌಶಲ ರೂಢಿಸಿಕೊಳ್ಳಿ

Kaushala, B.S.Belagali, Sports Cultural Activity, BLDE, Basavanbagewadi, Vijayapura, Entrepreneur,
ಬಸವನಬಾಗೇವಾಡಿ ಪಟ್ಟಣದ ವಿಜಯಪುರ ರಸ್ತೆಯ ಬಿ.ಎಲ್.ಡಿ.ಇ.ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕ್ರೀಡಾ- ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಗಣ್ಯರು, ಶ್ರೀಗಳು ಚಾಲನೆ ನೀಡಿದರು. ಪ್ರಾಚಾರ್ಯ ಬಿ.ಎಸ್.ಬೆಳಗಲಿ, ಸಿದ್ಧಲಿಂಗ ಶ್ರೀಗಳು, ಟಿ.ಮಲ್ಲೇಶ ಇತರರಿದ್ದರು.
Published on

ಬಸವನಬಾಗೇವಾಡಿ: ಮಹಾವಿದ್ಯಾಲಯಗಳು ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ಕೇಂದ್ರಗಳಾಗಿದ್ದು, ಅವುಗಳ ಭಾಗವಾದ ನಾವೆಲ್ಲರೂ ಸಾಮರ್ಥ್ಯ, ಕೌಶಲಗಳನ್ನು ರೂಢಿಸಿಕೊಳ್ಳಲು ಕಾಲೇಜು ಹಂತದಲ್ಲೇ ರೂಢಿಸಿಕೊಳ್ಳಬೇಕು ಎಂದು ವಿಜಯಪುರದ ಎ.ಎಸ್.ಪಿ. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್.ಬೆಳಗಲಿ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2024-25ನೇ ಶೈಕ್ಷಣಿಕ ವರ್ಷದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇವಲ ಸಂಬಳಕ್ಕಾಗಿ ದುಡಿಯದೆ, ಸಂಬಳ ಕೊಡುವ ಉದ್ಯಮಿಗಳಾಗಬೇಕು. ಪ್ರಪಂಚದ ಬಹುತೇಕ ಶ್ರೀಮಂತ ಸಾಧಕರ ವಿದ್ಯಾರ್ಹತೆ ಕಡಿಮೆಯಿದೆ. ಆದರೆ ಉತ್ಪಾದನೆಯಲ್ಲಿ ಸಾಕಷ್ಟು ಮುಂದಿರುವುದು ಕಂಡುಬರುತ್ತದೆ. ಅಂಥವರು ಸದ್ಯ ಯುವ ಪೀಳಿಗೆಗೆ ಆದರ್ಶವಾಗಿದ್ದಾರೆ ಎಂದು ಹೇಳಿದರು.

ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮುಖ್ಯವಾಗಿ ನೈತಿಕತೆ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಜತೆಗೆ ಸಮಯಕ್ಕೆ ಮಹತ್ವ ನೀಡಬೇಕು ಎಂದರು.

ವಿಜಯಪುರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಮಲ್ಲೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಡಾ.ಎ.ವಿ.ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು.

ಐ.ಕ್ಯೂ.ಎ.ಸಿ. ಸಂಯೋಜಕ ಪ್ರೊ.ದಿಲೀಪಕುಮಾರ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ನಾಯ್ಕೋಡಿ, ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಸಾಲವಾಡಗಿ, ದೈಹಿಕ ನಿರ್ದೇಶಕ ವಿ.ಎನ್.ರಜಪೂತ, ವಿದ್ಯಾರ್ಥಿ ಪ್ರತಿನಿಧಿಗಳಾದ ಭಾಗ್ಯಶ್ರೀ ಬಂಡಿ, ಭುವನೇಶ್ವರಿ ಗೇಡಿ, ಪ್ರೊ.ಸಿ.ಪಿ. ಧಡೇಕರ, ಡಾ.ವೈ.ಬಿ.ನಾಯಕ, ಡಾ.ಎಸ್.ಬಿ.ಜನಗೊಂಡ, ಎಸ್.ಜೆ.ಸೂರ್ಯವಂಶಿ, ಪಿ.ಎಸ್.ನಾಟೀಕಾರ, ಪಿ.ಎಸ್.ಹೊರಕೇರಿ, ಎಂ.ಆರ್.ಮಮದಾಪೂರ, ಆರ್.ಎನ್.ರಾಠೋಡ, ಆರ್.ಎಂ.ಮುಜಾವರ, ಜಯರಾಮ ರೆಡ್ಡಿ ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಗೀತಾ ಬಾಗೇವಾಡಿ ಸ್ವಾಗತಗೀತೆ ಹಾಡಿದರು. ಪ್ರೊ.ಎಂ.ಕೆ.ಯಾದವ ಸ್ವಾಗತಿಸಿ ಪರಿಚಯಿಸಿದರು. ಪ್ರೀತಿ ಚವ್ಹಾಣ ಹಾಗೂ ರೂಪಾ ಅಂಬಳನೂರ ನಿರೂಪಿಸಿದರು. ಚಂದ್ರಶೇಖರ ರೆಡ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net