`ಕೌದಿ' ಏಕವ್ಯಕ್ತಿ ನಾಟಕ ಪ್ರದರ್ಶನ

theatre-and-masks
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮೈಸೂರಿನ ಕವಿತಾ ಕಲಾ ತಂಡದಿ0ದ ಜೂ. 27ರಂದು ಬೆಳಗ್ಗೆ 11ಕ್ಕೆ ನಗರದ ಕೇಂದ್ರ ಕಾರಾಗೃಹದಲ್ಲಿ ಹಾಗೂ ಸಂಜೆ 6ಕ್ಕೆ ರಂಗಾಯಣದಲ್ಲಿ `ಕೌದಿ' ನಾಟಕದ ಪ್ರದರ್ಶನ ಏರ್ಪಡಿಸಲಾಗಿದೆ. ಕೇಂದ್ರ ಕಾರಾಗೃಹದ ಪ್ರದರ್ಶನವನ್ನು ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ನಿರ್ದೇಶಕ ಪ್ರಕಾಶ ದಾಸನೂರ ಉದ್ಘಾಟಿಸುವರು. ಕ್ಯುರೇಟರ್ ಡಾ. ವೇದಾರಾಣಿ ದಾಸನೂರ ಅತಿಥಿಯಾಗಿ ಭಾಗವಹಿಸುವರು. ಕಾರಾಗೃಹ ಮುಖ್ಯ ಅಧೀಕ್ಷಕ ಪಿ. ಮಹದೇವ ನಾಯ್ಕ ಅಧ್ಯಕ್ಷತೆ ವಹಿಸುವರು. ಸಂಜೆ 6 ಗಂಟೆಗೆ ರಂಗಾಯಣದಲ್ಲಿ ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಚಾಲನೆ ನೀಡುವರು. ಹಿರಿಯ ಲೇಖಕ ರಂಜಾನ್ ದರ್ಗಾ ಹಾಗೂ ಲೇಖಕಿ ಡಾ. ಅನಸೂಯಾ ಕಾಂಬಳೆ ಅತಿಥಿಗಳಾಗಿ ಭಾಗವಹಿಸುವರು. ಗಣೇಶ ಅಮೀನಗಡ ರಚಿಸಿದ ನಾಟಕವನ್ನು ಕಲಬುರಗಿಯ ಕಲಾವಿದೆ ಭಾಗ್ಯಶ್ರೀ ಪಾಳಾ ಪ್ರಸ್ತುತಪಡಿಸುವರು. ಜಗದೀಶ ಆರ್. ಜಾಣಿ ನಿರ್ದೇಶನ, ಪದ್ಮಾ ರಾಯಚೂರು ಸಂಗೀತ ಹಾಗೂ ಬೆಳಕಿನ ನಿರ್ವಹಣೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net