ಕಾಟುಕುಕ್ಕೆ ಷಷ್ಠಿ ಮಹೋತ್ಸವ : 7ರಂದು ರಥೋತ್ಸವ

Published on

ಕಾಸರಗೋಡು: ಪೆರ್ಲ ಸನಿಹದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಬುಧವಾರ ಆರಂಭಗೊಂಡಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಚೌಗ್ರಾಮಸ್ಥರ ಕೂಡುವಿಕೆಯೊಂದಿಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ, ಗಣಪತಿ ಹೋಮದೊಂದಿಗೆ ಐದು ದಿವಸಗಳ ವಾರ್ಷಿಕ ಜಾತ್ರೆಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ದೇವರ ಬಲಿ ಉತ್ಸವ ನಡೆಯಿತು.

5ರಂದು ಚೌತಿ ಉತ್ಸವ, 6ರಂದು ಪಂಚಮಿ ಉತ್ಸವ ನಡೆಯುವುದು. 7ರಂದು ಷಷ್ಠಿ ಮಹೋತ್ಸವ ಅಂಗವಾಗಿ ಬೆಳಗ್ಗೆ ಗಣಪತಿ ಹೋಮ, ತುಲಾಭಾರ ಸೇವೆ, ಸಂಜೆ 4.30ರಿಂದ ಬೀದಿ ಮಡೆಸ್ನಾನ, ರಾತ್ರಿ 8ಕ್ಕೆ ಶ್ರೀಭೂತಬಲಿ, ರಥೋತ್ಸವ, ಭಂಡಾರಮನೆ ವನಕ್ಕೆ ದೇವರ ಸವಾರಿ, ಬೆಡಿ ಉತ್ಸವ ನಡೆಯುವುದು. 8ರಂದು ಸಪ್ತಮಿ ಉತ್ಸವ, ಆರಾಟು ಮಹೋತ್ಸವ, ರಾತ್ರಿ 8ಕ್ಕೆ ಪಿಲಿಭೂತ ನೇಮ, 9ರಂದು ಉಗ್ರಾಣ ಶೋಧನೆ, ಸಂಜೆ ಕಾರ್ತಿಕ ಪೂಜೆ ನಡೆಯುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net