ಶಿಕ್ಷಣ ತಜ್ಞ ಡಾ. ಕಟ್ಟಿಮನಿ 137ನೇ ಜಯಂತಿ

KATTIMANI NEW
Published on

ಹುಬ್ಬಳ್ಳಿ : ಕೆಎಲ್​ಇ ಸಂಸ್ಥೆಯ ಸಂಸ್ಥಾಪಕ ಸರ್ಪ¤ಗಳಲ್ಲಿ ಒಬ್ಬರಾದ ಶಿಕ್ಷಣ ತಜ್ಞ ಡಾ.ಎಚ್.ಎಫ್. ಕಟ್ಟಿಮನಿ ಅವರ 137ನೇ ಜಯಂತಿ ಕಾರ್ಯಕ್ರಮವನ್ನು ನಗರದ ಬಿ.ವ್ಹಿ.ಬಿ. ಕಾಲೇಜು ಆವರಣದಲ್ಲಿರುವ ಎಚ್.ಎಫ್.ಕಟ್ಟಿಮನಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ಜು. 24ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.

ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಮುಖ್ಯ ಅತಿಥಿಯಾಗಿದ್ದು, ಶಾಲಾ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಂ. ಎಸ್. ಮುನವಳ್ಳಿ ಅಧ್ಯಕ್ಷತೆ ವಹಿಸುವರು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಬಿ.ಐ. ಬಿಜಾಪೂರ, ಎಂ.ಬಿ. ಕರಡಿ ಹಾಗೂ ಜೆ.ಜಿ. ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಬಿ. ನಾಯಕ ಅತಿಥಿಗಳಾಗಿ ಪಾಲ್ಗೊಳ್ಳುವರು.

ಧಾರವಾಡದಲ್ಲಿ : ಧಾರವಾಡದ ಡಯಟ್ ಆವರಣದಲ್ಲಿರುವ ಡಾ. ಎಚ್. ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದಲ್ಲಿ ಜು. 24ರಂದು ಬೆಳಗ್ಗೆ 11 ಗಂಟೆಗೆ ಡಾ. ಕಟ್ಟಿಮನಿ ಅವರ 137ನೇ ಜಯಂತಿ ಹಮ್ಮಿಕೊಳ್ಳಲಾಗಿದೆ.

ಪ್ರತಿಷ್ಠಾನದ ಗೌರವ ನಿರ್ದೇಶಕ ಎಸ್.ಬಿ. ಕೊಡ್ಲಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಪಾರ್ವತಿ ವಸ್ತ್ರದ, ಸುಜಾತಾ ತಿಮ್ಮಾಪೂರ, ಡಾ. ರೇಣುಕಾ ಅಮಲಝುರಿ, ವಿಜಯಲಕ್ಷ್ಮೀ ಅರ್ಕಸಾಲಿ, ಶಾಂತಾ ಮೀಸಿ, ಬಿ.ಸಿ. ಭಜಂತ್ರಿ ಅತಿಥಿಗಳಾಗಿ ಭಾಗವಹಿಸುವರೆಂದು ಸಂಚಾಲಕಿ ವಿ.ಎನ್. ಕೀರ್ತಿವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net