

ತಾಳಿಕೋಟೆ: ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯವತಿಂದ ಕೊಡಮಾಡುವ ಜಾನಪದ ರತ್ನ ಸಿರಿ ಪ್ರಶಸ್ತಿಗೆ ತಾಳಿಕೋಟೆಯ ಚನಬಸಪ್ಪ ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿನೋದಕುಮಾರ ಚಿಕ್ಕಮಠ ಅವರು ತಿಳಿಸಿದ್ದಾರೆ.
ಜಾನಪದ ಉಳಿಸಿ ಬೆಳೆಸುವಲ್ಲಿ ಚನಬಸ್ಸಪ್ಪ ಕಟ್ಟಿಮನಿ ಅವರು ವಹಿಸಿರುವ ಪ್ರಮುಖ ಪಾತ್ರವನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೇ 3 ರಂದು ಪಟ್ಟಣದ ಶ್ರೀ ವಿಠ್ಠಲ ಮಂದಿರದ ಸಭಾ ಭವನದಲ್ಲಿ ನಡೆಯಲಿರುವ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಉಚಿತ ನೃತ್ಯ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.