

ಮಮದಾಪುರ: ಗೋಕಾಕ ತಾಲೂಕಿನ ಬೆಣಚಿನಮರಡಿ(ಕೊ) ಗ್ರಾಮದಲ್ಲಿ ಮೇ 25 ರಿಂದ 26ರ ವರೆಗೆ ಶ್ರೀ ಕಟ್ಟಿ ವಿಠ್ಠಪ್ಪ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಲಿದೆ.
ಮೇ 25ರಂದು ಸಂಜೆ ಗ್ರಾಮದ ಎಲ್ಲ ದೇವರ ಪಲ್ಲಕ್ಕಿಗಳು ಕಟ್ಟಿ ವಿಠಪ್ಪ ದೇವರ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು. ರಾತ್ರಿ 10 ಗಂಟೆಗೆ ವಾಲಗ, ಡೊಳ್ಳಿನ ಪದ ನಡೆಯಲಿವೆ.
ಮೇ 26 ರಂದು ಬೆಳಗ್ಗೆ 6ಕ್ಕೆ ವಿಠ್ಠಪ್ಪ ದೇವರ ಗದ್ದುಗೆಗೆ ಅಭಿಷೇಕ ಸೇರಿ ವಿಶೇಷ ಪೂಜೆ ನೆರವೇರಲಿದೆ. ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ಪರದೇಶಿ &ನಾಗೇಶಿ ಚೌಡಕಿ ಪದಗಳ ಗಾಯನ ನಡೆಯಲಿದೆ. 11ಗಂಟೆಗೆ ದೇಸಿ ಆಕಳು, ಹೋರಿ ಹಾಗೂ ಎತ್ತುಗಳ ಬೃಹತ್ ಪ್ರದರ್ಶನ ಜರುಗಲಿದೆ. ತವಗ ಶ್ರೀಬಾಳಯ್ಯ ಅಜ್ಜನ (ಮೇಲ್ಗಡೆ ) ಮಠದ ಅಜ್ಜಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಚಾಲನೆ ನೀಡುವರು.
ಆಕರ್ಷಕ ಬಹುಮಾನ: ಖಿಲಾರಿ ಆಕಳುಗಳಿಗೆ ಪ್ರಥಮ ಬಹುಮಾನ 10,000 ರೂ., ದ್ವೀತಿಯ 8,000 ರೂ ಹಾಗೂ ತೃತೀಯ 6,000 ರೂ ಬಹುಮಾನವಿದೆ. ಹಲ್ಲು ಹಚ್ಚದ ಚಾಂಪಿಯನ್ ಹೋರಿ, ಜೋಡಿ ಹೋರಿ, ಎರಡು ಹಲ್ಲುಗಳಿಂದ ಆರು ಹಲ್ಲು ಹಾಗೂ ಜೋಡಿ ಎತ್ತುಗಳಿಗೆ ಪ್ರಥಮ ಬಹುಮಾನ 10,000 ರೂ., ದ್ವೀತಿಯ 8,000 ರೂ. ಹಾಗೂ ತೃತೀಯ 6,000 ರೂ. ಬಹುಮಾನಗಳಿವೆ. ಹಾಗೂ ಚತುರ್ಥ ಮತ್ತು ಪಂಚಮ ಬಹುಮಾನ ಇವೆ.
ಗ್ರಾಮದ ಎತ್ತುಗಳಿಗೆ ಪ್ರದರ್ಶನಕ್ಕೆ ಮಾತ್ರ ಅವಕಾಶವಿದೆ. ಬಹುಮಾನಕ್ಕೆ ಪರಿಗಣಿಸುವುದಿಲ್ಲ ಎಂದು ಜಾತ್ರಾ ಮಹೋತ್ಸವ ಕಮಿಟಿ ತಿಳಿಸಿದೆ.