

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಶ್ರೀ ದೇವರ ಆರಾಟ ಉತ್ಸವದ ಅಂಗವಾಗಿ ಉಪ್ಪಿನಂಗಡಿ ಪೇಟೆಯ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದ ದೇವರ ಕಟ್ಟೆಯಲ್ಲಿ ಕಟ್ಟೆ ಪೂಜೆ ಜರುಗಿತು.
ಹೊಸ ಬಸ್ ನಿಲ್ದಾಣದ ಕಟ್ಟೆ ಪೂಜೆಯನ್ನು ವಿಹಿಂಪ ಮತ್ತು ಬಜರಂಗದಳದ ನೇತೃತ್ವದಲ್ಲಿ ದೇವರ ಕಟ್ಟೆ ಪೂಜನಾ ಸಮಿತಿಯ ಆಶ್ರಯದಲ್ಲಿ ನಡೆಸಲಾಯಿತು.
ನಂದಿ ರಥಯಾತ್ರೆಯನ್ನು ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು. ಗಣಪತಿಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಾಯಂಕಾಲ ಉಪಾಹಾರ, ಪ್ರಸಾದ ವಿತರಣೆ ನಡೆದಿದ್ದು, ಆಕರ್ಷಕ ಸುಡುಮದ್ದು, ಚೆಂಡೆ ವಾದನ, ಭಜನಾ ಕಾರ್ಯಕ್ರಮದೊಂದಿಗೆ ಕಟ್ಟೆ ಪೂಜೆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.
ಹಿಂದು ಮುಂದಾಳು ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್, ವೆಂಕಪ್ಪ ಪೂಜಾರಿ, ಕೃಷ್ಣ ರಾವ್ ಅರ್ತಿಲ, ಕರುಣಾಕರ ಸುವರ್ಣ, ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ವಿಹಿಂಪ ಅಧ್ಯಕ್ಷ ಎಂ.ಸುದರ್ಶನ ಕುಮಾರ್, ಪೂಜನಾ ಸಮಿತಿಯ ಅಧ್ಯಕ್ಷ ಪ್ರಸಾದ್ ಪಚ್ಚಾಡಿ, ಉಪಾಧ್ಯಕ್ಷ ರಾಜೇಶ್ ಹತ್ತು ಕಲಸೆ, ಕಾರ್ಯದರ್ಶಿ ಸಂತೋಷ್ ಕುಮಾರ್ ಪೆರಿಯಡ್ಕ, ಜತೆ ಕಾರ್ಯದರ್ಶಿ ರವಿನಂದನ್ ಹೆಗ್ಡೆ, ಕೋಶಾಧಿಕಾರಿ ತಿಮ್ಮಪ್ಪ ಇಳಂತಿಲ, ಗೌರವ ಸಲಹೆಗಾರ ರವೀಂದ್ರ ಆಚಾರ್ಯ, ಪ್ರಮುಖರಾದ ಮಾಧವ ಆಚಾರ್ಯ, ರಾಘವೇಂದ್ರ ನಾಯಕ್ ಎನ್, ಎಚ್.ಸುಬ್ರಹ್ಮಣ್ಯ ಶೆಣೈ, ಮಹೇಶ್ ಬಜತ್ತೂರು, ಹರೀಶ್ ಶೆಟ್ಟಿ, ಕಿಶೋರ್ ನೀರಕಟ್ಟೆ, ರಾಧಾಕೃಷ್ಣ ಬೊಳ್ಳಾವು, ಹರೀಶ್ ನಾಯಕ್ ನಟ್ಟಿಬೈಲು, ವೆಂಕಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.