ಬಲೆಗೆ ಬಿದ್ದ 24 ಕೆಜಿ ತೂಕದ ಕಟ್ಲ ಮೀನು

Mahaligapur Fish
ಮಹಾಲಿಂಗಪುರ ಸಮೀಪದ ಢವಳೇಶ್ವರ ಗ್ರಾಮದ ಘಟಪ್ರಭಾ ನದಿ ತೀರದಲ್ಲಿ ಹಾಕಿದ್ದ ಬಲೆಗೆ ಬಿದ್ದಿರುವ ಅಪರೂಪದ ಕಟ್ಲಾ ಮೀನನ್ನು ಮೀನುಗಾರರು ಬಲೆಯಿಂದ ಹೊರ ತೆಗೆದರು.
Published on

ಮಹಾಲಿಂಗಪುರ (ಬಾಗಲಕೋಟೆ) : ಕೃಷ್ಣ ಹಾಗೂ ಘಟಪ್ರಭಾ ನದಿಯಲ್ಲಿ ಹೆಚ್ಚೆಂದರೆ 5 ರಿಂದ 6 ಕೆಜಿ ತೂಕದ ಕಟ್ಲ ಮೀನುಗಳು ಬಲೆಗೆ ಬೀಳುವುದು ಸಾಮಾನ್ಯ. ಆದರೆ ಸಮೀಪದ ಢವಳೇಶ್ವರ ಗ್ರಾಮದ ಹತ್ತಿರ ಘಟಪ್ರಭಾ ನದಿಯಲ್ಲಿ ಮಂಗಳವಾರ ಮೀನುಗಾರರು ಹಾಕಿದ ಬಲೆಗೆ ಸರಿಸುಮಾರು 24 ಕೆಜಿಗಿಂತಲೂ ಅಧಿಕ ತೂಕದ ಎರಡು ಕಟ್ಲ ಮೀನುಗಳು ಬಿದ್ದಿದೆ.

ಭಾರಿ ಮಳೆಯಿಂದ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಮೀನುಗಾರರಾದ ಅಶೋಕ ಭೋವಿ, ಇಸಾಕ್ ಜಮಾದಾರ, ಅರ್ಜುನ್ ಭೋವಿ ಜತೆಗೂಡಿ ಬಲೆ ಹಾಕಿದ್ದರು. ಇವರ ಬಲೆಗೆ ಕಟ್ಲ ಜಾತಿಯ ಮೀನು ಬಿದ್ದಿದ್ದು, ರುಚಿಗೆ ಹೆಸರಾದ ಈ ಮೀನುಗಳನ್ನು ಕೊಳ್ಳಲು ಮತ್ಸಪ್ರಿಯರು ಮುಗಿಬಿದ್ದು, ತಲಾ ಐದು ಸಾವಿರ ರೂ. ನೀಡಿ ತೆಗೆದುಕೊಂಡಿದ್ದಾರೆ. ಕಟ್ಲ ಮೀನು ತಂದ ಸೌಭಾಗ್ಯಕ್ಕೆ ಮೀನುಗಾರರೂ ಖುಷ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net