ಸಮಾಜಕ್ಕೆ ದಾರಿದೀಪವಾಗಲಿ ಸಾಹಿತ್ಯ: ಮಲಾರ್ ಜಯರಾಮ ರೈ ಆಶಯ

19
Published on

ಉಪ್ಪಳ: ಸಾಹಿತ್ಯವು ರಸಸ್ವಾದನೆಗೆ ಸಂದರ್ಭ ಒದಗಿಸುವುದರೊಂದಿಗೆ ಸಮಾಜವನ್ನು ಒಳಿತಿನ ಕಡೆಗೆ ಮುನ್ನಡೆಸಲು ಸಹಾಯಕವಾಗಬೇಕು. ವೇದ, ಉಪನಿಷತ್ತುಗಳ ಆಶಯಗಳು, ಆದರ್ಶಗಳು ಕಥಾವಸ್ತುಗಳಾಗಿ ಮೂಡಿಬಂದಾಗ ಯುವಜನಾಂಗಕ್ಕೆ ಮಾರ್ಗದರ್ಶಕವಾಗಿರುತ್ತವೆ ಎಂದು ಸಾಹಿತಿ ಮಲಾರ್ ಜಯರಾಮ ರೈ ಹೇಳಿದರು.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಕಾರದೊಂದಿಗೆ ಬಾಯಿಕಟ್ಟೆಯಲ್ಲಿ ಲೇಖಕಿ ವಿಜಯಲಕ್ಷ್ಮೀ ಶಾನುಭೋಗ್ ಅವರ ‘ವ್ಯೆಹ’ ಕಥಾ ಸಂಕಲನದ ಬಿಡುಗಡೆ ಮತ್ತು ಕಥಾ ವಾಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಹಿತಿ ರಾಧಾಕೃಷ್ಣ ಕೆ.ಉಳಿಯತಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಡಾ.ಪಾರ್ವತಿ ಜಿ.ಐತಾಳ್ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂ ಅಧ್ಯಕ್ಷ ಡಾ.ರಮಾನಂದ ಬನಾರಿ ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಿಕ್ಷಕಿ ಆಶಾ ದಿಲೀಪ್ ಸುಳ್ಯಮೆ ಕೃತಿ ಪರಿಚಯ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಸಾಹಿತಿ ಲಕ್ಷ್ಮೀ ವಿ.ಭಟ್, ಬಾಯಿಕಟ್ಟೆ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸುದರ್ಶನ ಪಾಣಿ ಬಲ್ಲಾಳ್ ಉಪಸ್ಥಿತರಿದ್ದರು. ಗ್ರೀಷ್ಮ ಕಾಟುಕುಕ್ಕೆ, ಸಾನಿಧ್ಯ ಭಟ್ ಮೀಯಪದವು, ಇಶಾನಿ ತೊಟ್ಟೆತ್ತೋಡಿ, ಕೊಡ್ಲಮೊಗರು ಪ್ರೌಢಶಾಲಾ ವಿದ್ಯಾರ್ಥಿನಿಯರಾದ ನಿಶ್ಮಿತಾ, ಸ್ವಾತಿ, ಯಶ್ಮಿತಾ, ಧನ್ಯಶ್ರೀ ಕಥಾ ವಾಚನ ಮಾಡಿದರು.

ಕಥಾವಾಚನ ಮಾಡಿದವರಿಗೆ ಡಾ.ಕೆ.ಕೆ.ಶಾನುಭೋಗ್ ಪುಸ್ತಕ ಉಡುಗೊರೆ ನೀಡಿದರು. ಬಬಿತಾ ಆಚಾರ್ಯ ಮತ್ತು ಮಾಲತಿ ಜಗದೀಶ್ ಭಾವಗೀತೆ ಹಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಸ್ವಾಗತಿಸಿದರು. ಲೇಖಕಿ ವಿಜಯಲಕ್ಷ್ಮೀ ಶಾನುಭೋಗ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net