ಕಟೀಲು ದೇವಳ ಗೋಶಾಲೆಗೆ ಪುಂಗನೂರು ತಳಿ ಹಸು ಸೇರ್ಪಡೆ

punganoor
Published on

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದ ಗೋಶಾಲೆಗೆ ಶನಿವಾರ ಮೂರು ಪುಂಗನೂರು ತಳಿಯ ಹಸುಗಳು ಸೇರ್ಪಡೆಯಾಗಿವೆ.

ದೇಗುಲವು ಮೂರು ಗೋಶಾಲೆಗಳನ್ನು ಹೊಂದಿದ್ದು, ಗೋಶಾಲೆಯಲ್ಲಿ 152 ಗೋವುಗಳಿವೆ. ಮಿಶ್ರ ತಳಿ 65. ಮಲೆನಾಡ ಗಿಡ್ಡ 60, ಜೆರ್ಸಿ 10, ಗಿರ್ 8, ಸಾಯಿವಾಲಾ 1, ಹಳ್ಳಿಕಾರ್ 3, ಎಚ್‌ಎಫ್ 2, ಪುಂಗನೂರು 3 ಗೋವುಗಳಿದ್ದು, 90 ಗಂಡು 62 ಹೆಣ್ಣು ದನಗಳಾಗಿವೆ. ಕಳೆದ ವರ್ಷ ಗೋಸೇವೆಗೆ ದೇಗುಲವು ಸುಮಾರು 50ಲಕ್ಷ ರೂ. ವೆಚ್ಚ ಮಾಡಿದೆ.


ಇತ್ತೀಚಿನ ವರ್ಷಗಳಲ್ಲಿ ದೇಗುಲದ ಆಡಳಿತವು ದೇಸೀದನಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದು, ಶನಿವಾರ ಮೂರು ಪುಂಗನೂರು ದನಗಳು ಸೇರ್ಪಡೆಯಾಗಿವೆ. ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನಾಲ್ಕು ಪುಂಗನೂರು ಗೋವುಗಳನ್ನು ನೀಡಿರುವ ಹೈದರಾಬಾದಿನ ಎ.ಎಂ.ಆರ್ ಗ್ರೂಪ್‌ನ ಆಡಳಿತ ನಿರ್ದೇಶಕ ಎ. ಮಹೇಶ್ ರೆಡ್ಡಿ ಅವರೇ ಕಟೀಲು ದೇಗುಲಕ್ಕೂ ಮೂರು ಗೋವುಗಳನ್ನು ನೀಡುತ್ತಿದ್ದು, ಶನಿವಾರ ಗೋಶಾಲೆ ಸೇರಿವೆ. ಅ.17ರಂದು ಗಂಡು- ಹೆಣ್ಣು ಹಾಗೂ ಅವುಗಳ ಕರು ಹೀಗೆ ಮೂರು ಗೋವುಗಳ ಸಮರ್ಪಣೆ, ಚಂಡಿಕಾಹೋಮ ನಡೆಯಲಿದ್ದು, ಕಟೀಲು ದೇಗುಲದಲ್ಲಿ ನವರಾತ್ರಿಯ ಅಷ್ಟೂ ದಿನಗಳ ಅನ್ನಸಂತರ್ಪಣೆಗೆ ಬೇಕಾದ ಹತ್ತು ಟನ್ ಅಕ್ಕಿಯನ್ನೂ ಮಹೇಶ್ ರೆಡ್ಡಿಯವರೇ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net