ಕಟೀಲು ಶಿವಳ್ಳಿ ಸ್ಪಂದನ ಕ್ರೀಡೋತ್ಸವ

mng--17 may shivalli sports
Published on

ಮಂಗಳೂರು: ಮಂಗಳೂರು ಶಿವಳ್ಳಿ ಸ್ಪಂದನ ಕ್ರೀಡೋತ್ಸವ 2024 ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಿತು.


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಮುಕ್ತೇಸರ ಹಾಗೂ ಅನುವಂಶಿಗೆ ಅರ್ಚಕ ವೇದಮೂರ್ತಿ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು.
ಮಂಗಳೂರಿನ 13 ವಲಯಗಳ ಕುಟುಂಬದ ಸದಸ್ಯರುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದರು.


ಸಮಾರೋಪ ಸಮಾರಂಭದಲ್ಲಿ ವೇದಮೂರ್ತಿ ವೆಂಕಟರಮಣ ಆಸ್ರಣ್ಣರು ಮಾತನಾಡಿ, ಕ್ರೀಡೆಯು ಸಮಗ್ರ ಶಿವಳ್ಳಿ ಬಾಂಧವರನ್ನು ಒಗ್ಗೂಡಿಸುವಲ್ಲಿ ಮಹತ್ತರ ಹೆಜ್ಜೆಯನ್ನು ಇರಿಸಿದೆ. ಕ್ರೀಡೆಯಿಂದಲೂ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬಹುದು ಎಂದರು.


ಶಿವಳ್ಳಿ ಸ್ಪಂದನ ಅಧ್ಯಕ್ಷ ಕೆ.ಕೃಷ್ಣ ಭಟ್,ಸುಬ್ರಹ್ಮಣ್ಯ ಪ್ರಸಾದ್, ಮೋಹನ್ ರಾವ್ ಪಾವಂಜೆ, ಮಹಿಳಾ ಘಟಕ ಅಧ್ಯಕ್ಷೆ ರಮಾಮಣಿ, ಎಲ್ಲೂರು ರಾಮಚಂದ್ರ ಭಟ್, ದೀಪಾ ಕೆ. ಭಟ್, ಸಂಹಿತಾ ಅಲೆವೂರಾಯ, ಶ್ರೀನಿವಾಸ ರಾವ್ ಇದ್ದರು.


ಕಟೀಲು ವಲಯದ ಅಧ್ಯಕ್ಷ ಆನಂತ ಪದ್ಮನಾಭ ಆಚಾರ್ಯ ವಂದಿಸಿದರು. ವಲಯ ಉಸ್ತುವಾರಿ ಪ್ರದೀಪ್ ಕುಮಾರ್ ರಾವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net