26ರಿಂದ ಕಟೀಲು ರಸ್ತೆ ಸಂಚಾರ ತಾತ್ಕಾಲಿಕ ಮಾರ್ಪಾಡು

divert
Published on

ಮಂಗಳೂರು: ದಸರಾ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಮತ್ತು ಲಲಿತ ಪಂಚಮಿ ಮಹೋತ್ಸವ ನಡೆಯಲಿರುವ ಹಿನ್ನಲೆಯಲ್ಲಿ ಸೆ.26 ಬೆಳಗ್ಗೆ 6 ಗಂಟೆಯಿಂದ ಅ.5ರ ರಾತ್ರಿ 11 ಗಂಟೆ ತನಕ ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಲಾಗಿದೆ.


ಮಂಗಳೂರು- ಬಜಪೆ ಕಡೆಯಿಂದ ಕಟೀಲಿಗೆ ಬರುವ ವಾಹನಗಳು ಮಲ್ಲಿಗೆಯಂಗಡಿ ಕ್ರಾಸ್‌ನಿಂದ ಏಕಮುಖವಾಗಿ ಚಲಿಸಿ, ಗಿಡಿಗೆರೆ ರಸ್ತೆ ಮೂಲಕ ಕಟೀಲು ಕಾಲೇಜು ಮುಖ್ಯ ರಸ್ತೆಯನ್ನು ಸೇರುವುದು. ಕಟೀಲಿನಿಂದ ಮಂಗಳೂರು ಕಡೆಗೆ ಹೋಗುವ ಎಲ್ಲ ವಾಹನಗಳು ದೇವಸ್ಥಾನದ ಪದವಿ ಪೂರ್ವ ಕಾಲೇಜು ಮೈದಾನದ ಮೂಲಕ ಬ್ಯಾಂಕ್ ಆಫ್ ಬರೋಡಾ ಎದುರುಗಡೆ ರಸ್ತೆಯಲ್ಲಿ ಚಲಿಸಿ ಬಜಪೆ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು. ಉಲ್ಲಂಜೆ ರಸ್ತೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಮತ್ತು ಮಲ್ಲಿಗೆಯಂಗಡಿಯಿಂದ ಕಟೀಲು ಹಾಗೂ ಮಂಗಳೂರು ಕಡೆಗೆ ಹೋಗುವ ವಾಹನಗಳು ಮಲ್ಲಿಗೆಯಂಗಡಿ ಜಂಕ್ಷನ್‌ನಿಂದ ಗಿಡಿಗೆರೆ ರಸ್ತೆಗೆ ಏಕಮುಖವಾಗಿ ಚಲಿಸಿ ಕಟೀಲು ಕಾಲೇಜು ಮುಖ್ಯ ರಸ್ತೆಯನ್ನು ಸೇರುವುದು.


ರಥಬೀದಿಯಲ್ಲಿ ಎಲ್ಲ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ (ವಾಹನ ಪೂಜೆಗೆ ಸಂಬಂಧಿಸಿದ ವಾಹನಗಳನ್ನು ಹೊರತುಪಡಿಸಿ) ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net