ಮಠ ಮಂದಿರಗಳಿಂದ ಸಂಸ್ಕೃತಿ ಸಂಸ್ಕಾರ

kateel new
Published on

ಕಿನ್ನಿಗೋಳಿ: ಯಾಂತ್ರಿಕ ಬದುಕಿನ ಇಂದಿನ ದಿನದಲ್ಲಿ ಸಂಸ್ಕೃತಿ ಸಂಸ್ಕಾರ ಮರೆಯುತ್ತಿದೇವೆ. ಮಠ ಮಂದಿರಗಳು ಸಂಸ್ಕಾರ ಕೊಡುವ ಕೆಲಸ ಮಾಡಬೇಕು. ಸಂತನಾದವನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಇದು ಭಗವಂತನ ಸೇವೆಯಾಗಿರಲಿ ಎಂದು ಮಾಣಿಲ ಮೋಹನದಾಸ ಸ್ವಾಮೀಜಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭ್ರಾಮರಿ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

‘ಭಾರತ ಮಾತೆ ಮತ್ತು ಆರಾಧನೆ’ ವಿಷಯದಲ್ಲಿ ಉಪನ್ಯಾಸ ನೀಡಿದ ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ನವೀನ್ ನಾಗಪ್ಪ, ಯೋಧನಾಗಿ ಕಾರ್ಗಿಲ್ ಕದನದಲ್ಲಿ ಭಾಗಿಯಾಗಿದ್ದೇನೆ ಎಂಬ ಸಂತೃಪ್ತಿ ಇದೆ. ಕಾರ್ಗಿಲ್ ಕದನದಲ್ಲಿ 527 ಸೈನಿಕರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಇದು ನಿಜವಾದ ತ್ಯಾಗ, ಮತ್ತೊಮ್ಮೆ ಯುದ್ಧ ನಡೆದರೂ ಯುದ್ದ ಭೂಮಿಗೆ ಹೋಗಲು ತಯಾರಾಗಿದ್ದೇನೆ ಎಂದರು.

ಮಂಗಳಾದೇವಿ ದೇವಳ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆನುವಂಶಿಕ ಅರ್ಚಕ ರಾಮದಾಸ ಆಚಾರ್ಯ, ಮಂಗಳಾದೇವಿ ದೇವಳ ಆನುವಂಶಿಕ ಅರ್ಚಕ ಶ್ರೀನಿವಾಸ ಐತಾಳ, ಶಿಬರೂರು ಮೂಡುಮಠ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ, ಸುರತ್ಕಲ್ ಎನ್‌ಐಟಿಕೆ ಅಧ್ಯಕ್ಷ ಡಾ.ಕೆ.ಬಲವೀರ ರೆಡ್ಡಿ, ವಕೀಲ ಕೇಶವಮೂರ್ತಿ, ಮಂಗಳೂರು ಯುನೈಟೆಡ್ ಟೋಯೋಟಾ ಚೇರ್‌ಮನ್ ಆರೂರು ಪ್ರಭಾಕರ ರಾವ್, ಮಂಗಳೂರು ಅರವಿಂದ ಮೋಟಾರ್ಸ್‌ ಮಾಲೀಕ ಆರೂರು ಕಿಶೋರ್ ರಾವ್, ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಉದ್ಯಮಿ ಬಜಪೆ ತಾರಿಕಂಬ್ಳ ರಘುರಾಜ್ ಭಟ್, ಚಾರ್ಟಡ್ ಅಕೌಂಟೆಂಟ್ ಬಿ.ಸುದೇಶ್ ರೈ, ಶಿರ್ತಾಡಿ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್‌ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಕಟೀಲು ಗ್ರಾಪಂ ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಉದ್ಯಮಿ ಅಜಾರು ದಿನೇಶ್ ಶೆಟ್ಟಿ ಮಲಬಾರ್ ಗೋಲ್ಡ್‌ನ ಕರುಣಾಕರ ಶೆಟ್ಟಿ, ಸುಂದರ ಶೆಟ್ಟಿ ಮಂಗಳೂರು, ಉಡುಪಿ ವಕೀಲರ ಸಂಘದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

ವೆಂಕಟರಮಣ ಆಸ್ರಣ್ಣ ಸ್ವಾಗತಿಸಿದರು. ನವೀನ್ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಭರತೇಶ್ ಶೆಟ್ಟಿ ಎಕ್ಕಾರು ವಂದಿಸಿದರು.

ಇಂದು ಸುವರ್ಣಧ್ವಜ ಪ್ರತಿಷ್ಠೆ: ಶುಕ್ರವಾರ ನೂತನ ಸುವರ್ಣ ಧ್ವಜ ಪ್ರತಿಷ್ಠೆ, ಧ್ವಜಕಲಶಾಭಿಷೇಕ, ಧ್ವಜಾರೋಹಣ, ಭಾಗ್ವೈಕಮತ್ಯ ಹೋಮ, ಲಕ್ಷ್ಮೀಸಹಸ್ರನಾಮ ಹೋಮ, ಹೊರಗಿನ ನಾಗಸನ್ನಿಧಿಯಲ್ಲಿ ಕಲಶಾಭಿಷೇಕ, ಆಶ್ಲೇಷಾಬಲಿ ನಡೆಯಲಿದೆ. ಬೆಳಗ್ಗೆ ಭ್ರಾಮರೀವನದಲ್ಲಿ ಬಿಂಬಶುದ್ಧಿ, ನವಗ್ರಹ ಸ್ಥಾಪನೆ, ಸೂರ್ಯಯಾಗ, ಸಹಸ್ರ ಚಂಡಿಕಾ ಸಪ್ತಶತೀ ಪಾರಾಯಣ, ಕೋಟಿ ಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವ್ರಕ್ಷಗಳ ಸ್ಥಾಪನೆ. ಸಾಯಂಕಾಲ ಅದ್ಭುತಶಾಂತಿ, ಉತ್ಸವಬಲಿ, ಚಾಮುಂಡಿ ಸನ್ನಿಧಿಯಲಿಲ ವಾಸ್ತುಪೂಜೆ, ಕಲಶಾಭಿಷೇಕ, ಬ್ರಹ್ಮರಸನ್ನಿಧಿಯಲ್ಲಿ ವಾಸ್ತುಪೂಜೆ, ಭ್ರಾಮರೀವನದಲ್ಲಿ ಆಶ್ಲೇಷಾಬಲಿ, ನಾಗ ಮತ್ತು ವ್ಯಾಘ್ರ ಚಾಮುಂಡಿ ಕಲಶಾಭಿಷೇಕ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net