ಲಾಕರ್ ಸಮೇತ 8.35 ಲಕ್ಷ ರೂ.ಕಳ್ಳತನ ; ಎಎಸ್ಪಿ ವೇಣುಗೋಪಾಲ ಭೇಟಿ

IMG-20230730-WA0014.jpg
Published on

ಬೆಳಗಾವಿ : ಕೃಷಿ ಪತ್ತಿನ ಸಹಕಾರಿ ಸೊಸೈಟಿ ಕಚೇರಿಯ ಕಿಟಕಿ ಮುರಿದ ಖದೀಮರು ಶುಕ್ರವಾರ ತಡರಾತ್ರಿ 8.35 ಲಕ್ಷ ರೂ.ಸಮೇತ ಕಬ್ಬಿಣದ ಲಾಕರ್ ಕದ್ದೋಯ್ದಿರುವ ಘಟನೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಸಂಭವಿಸಿದೆ.

ಸೊಸೈಟಿ ಕಚೇರಿ ಹಿಂಬದಿಯಲ್ಲಿನ ಕಿಟಕಿಯ ಕಬ್ಬಿಣದ ಸಲಾಕೆಗಳನ್ನು ಮುರಿದು ಒಳನುಗ್ಗಿರುವ ಕಳ್ಳರು, ಲಾಕರ್ ಒಡೆಯಲಾಗದ್ದರಿಂದ ಲಾಕರ್ ಸಮೇತವೇ ಕಳ್ಳತನ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.
ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಬೆರಳಚ್ಚು ತಜ್ಞರು ಹಾಗೂ ಶ್ವಾನ ಧಳದ ಸಮೇತ ಭೇಟಿ ನೀಡಿದ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಭಾನುವಾರ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ವೇಣುಗೋಪಾಲ ಭೇಟಿ ನೀಡಿ ಡಿವೈಎಸ್ಪಿ ರಾಮನಗೌಡ ಹಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಹಾಗೂ ಪಿಎಸ್‌ಐ ಸಿದ್ದರಾಮಪ್ಪ ಉನ್ನದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net