ಬೆಳಗೊಳದಲ್ಲಿ ಕಾಟಾ ಕುಸ್ತಿ ಪಂದ್ಯಾವಳಿ

12-12--krs2 (1)
Published on

ಕೆ.ಆರ್.ಸಾಗರ: ಬೆಳಗೊಳ ಗ್ರಾಮದಲ್ಲಿ ಸೋಮವಾರ ಶ್ರೀ ಹಿರಿದೇವಮ್ಮ ಹಬ್ಬದ ಪ್ರಯುಕ್ತ ಕಾಟಾ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಶ್ರೀ ಹಿರಿದೇವಮ್ಮ ದೇವಾಲಯ ಆವರಣದಲ್ಲಿ ಕುಸ್ತಿ ಪಂದ್ಯಗಳು ನಡೆದವು. 25 ಜೋಡಿಗಳು ಪಾಲ್ಗೊಂಡಿದ್ದವು. ಕೆಮ್ಮಣ್ಣಿನ ಮಟ್ಟಿಯ ಮೇಲೆ ಪೈಲ್ವಾನರ ಕಾದಾಟವನ್ನು ಕುಸ್ತಿ ಪ್ರಿಯರು ಕಣ್ತುಂಬಿಕೊಂಡರು. ವಿಜೇತರಿಗೆ ಗ್ರಾಮದ ಹಿರಿಯ ಮುಖಂಡರು ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net