

ಮಂಡ್ಯ: ಬಿಹಾರದ ಪಾಟ್ನಾದಲ್ಲಿ ಮೇ 10ರಿಂದ 14ರವರೆಗೆ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ನಗರದ ಕಶ್ವಿ ಸುನೀಲ್ ಆಯ್ಕೆಯಾಗಿದ್ದಾರೆ ಎಂದು ಪಿಇಎಸ್ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅನಂತ ಪದ್ಮನಾಭಪ್ರಭು ತಿಳಿಸಿದರು.
2024ರ ಮಾರ್ಚ್‌ನಲ್ಲಿ ಜೆ-30 ಮತ್ತು ಆಗಸ್ಟ್‌ನಲ್ಲಿ ಜೆ-60 ಅಂತಾರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ವತಿಯಿಂದ ನಡೆದ ಪಂದ್ಯಾವಳಿಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದರು. 2020ರಿಂದ ಆಲ್ ಇಂಡಿಯಾ ಲಾನ್ ಟೆನ್ನಿಸ್ ಅಸೋಸಿಯೇಷನ್‌ನ ಹಲವು ಪಂದ್ಯಾವಳಿ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ಜೂನಿಯರ್ ವರ್ಲ್ಡ್ ರ‌್ಯಾಂಕಿಂಗ್ 2025ರ ಜನವರಿಯ ಪ್ರಕಟವಾದಂತೆ 632ನೇ ರ‌್ಯಾಂಕ್ ಹೊಂದಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಶ್ವಿ ತಂದೆ ಸುನೀಲ್ ಮಾತನಾಡಿ, ರಾಷ್ಟ್ರದಲ್ಲಿ ಆಯೋಜಿಸಲಾಗುತ್ತಿರುವ ಸಾಕಷ್ಟು ಪಂದ್ಯಾವಳಿಗಳಲ್ಲಿ ಭಾಗವಹಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಕೈಲಾದಷ್ಟು ಪಂದ್ಯಾವಳಿಗಳಲ್ಲಿ ಮಗಳ ಪ್ರತಿಭೆ ಅನಾವರಣಗೊಳಿಸಲು ಪ್ರಯತ್ನಿಸುತ್ತಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಎಲ್ಲ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ತರಬೇತುರಾರ ಎಂ.ಎಸ್.ಮಂಜುನಾಥ್ ಮಾತನಾಡಿ, ಕಶ್ವಿ ಸುನೀಲ್‌ಗೆ ಪ್ರಾಯೋಜಕತ್ವ ದೊರೆತಲ್ಲಿ ಆಕೆಯ ಪ್ರತಿಭೆಯನ್ನು ಮತ್ತಷ್ಟು ಮುನ್ನಡೆಗೆ ತಂದು ಉತ್ತಮ ರ‌್ಯಾಂಕಿಂಗ್ ಪಡೆಯಲು ಸಾಧ್ಯವಾಗುತ್ತದೆ. ಹಾಗಾದಲ್ಲಿ 18 ವರ್ಷದೊಳಗೆ ರಾಷ್ಟ್ರವನ್ನು ಪ್ರತಿನಿಧಿಸಲು ಸಶಕ್ತ ಕ್ರೀಡಾಪಟುವಾಗಿದ್ದಾರೆ ಎಂದು ಭರವಸೆಯ ಮಾತುಗಳನ್ನಾಡಿದರು.
ಲಾನ್ ಟೆನ್ನಿಸ್ ಕ್ರೀಡಾಪಟು ಕಶ್ವಿ ಸುನೀಲ್ ಇದ್ದರು.