ಸರ್ಕಾರದಿಂದ ರೇಣುಕಾಚಾರ್ಯ ಜಯಂತಿ: ಶ್ರೀಶೈಲ-ಕಾಶಿ ಜಗದ್ಗುರುಗಳ ಅಭಿನಂದನೆ

Renukacharya
Published on

ಬೆಂಗಳೂರು: ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರದಿಂದ ಪ್ರತಿ ವರ್ಷ ಆಚರಿಸಲು ನಿರ್ಧಾರ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳು ಅಭಿನಂದಿಸಿದ್ದಾರೆ.

ಮಹಾತ್ಮರ ಜಯಂತಿಗಳು ಅವರ ಆದರ್ಶಗಳನ್ನು ಸಮಾಜದಲ್ಲಿ ಪ್ರಚಾರ ಮಾಡಲು ಪೂರಕವಾಗುತ್ತವೆ. ಈ ಹಿನ್ನೆಲೆಯಲ್ಲಿ ಜಗದ್ಗುರು ಪಂಚಾಚಾರ್ಯರು ನೀಡಿದ ಸೂತ್ರಗಳು ಮಾನವ ಕಲ್ಯಾಣಕ್ಕೆ ದಾರಿದೀಪವಾಗಿದ್ದು, ಸರ್ಕಾರ ಅವರ ಜಯಂತಿ ಆಚರಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಉಭಯ ಜಗದ್ಗುರುಗಳು ಅಭಿಪ್ರಾಯ ಪಟ್ಟಿದ್ದಾರೆ.

ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಪ್ರತಿ ವರ್ಷ ಮಾರ್ಚ್ 16ರಂದು ರಾಜ್ಯಾದ್ಯಂತ ಆಚರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net