ಪ್ರತಿಭಾನ್ವಿತರನ್ನು ಗುರುತಿಸುವ ಕಾರ್ಯವಾಗಲಿ : ಕಾಸರಗೋಡು ಚಿನ್ನಾ

mng-12nov-yashogeete
Published on

ಮಂಗಳೂರು : ಸಾಧನೆಯ ಕ್ರಿಯಾಶೀಲ ವ್ಯಕ್ತಿತ್ವವನ್ನು ಅನೇಕ ವರ್ಷಗಳಿಂದ ಮೈಗೂಡಿಸಿಕೊಂಡಿದ್ದರೂ, ಮುಂಚೂಣಿಗೆ ಬಾರದ ಅನೇಕ ಪ್ರತಿಭಾನ್ವಿತರು ತೆರೆಯ ಮರೆಯಲ್ಲಿ ಇದ್ದಾರೆ. ಇಂತವರನ್ನು ಗುರುತಿಸುವ ಕಾರ್ಯವನ್ನು ಸಮಾಜ ಮತ್ತು ಅಕಾಡೆಮಿಗಳು ಮೂಲಕ ನಡೆಯಬೇಕೆಂದು ಹಿರಿಯ ರಂಗ ಕರ್ಮಿ ಕಾಸರಗೋಡು ಚಿನ್ನಾ ಹೇಳಿದರು.
ನಗರದ ಪುರಭವನದಲ್ಲಿ ನಡೆದ ಯಶೋಗೀತೆಗಳ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಕವಿ, ನಿವೃತ್ತ ಪತ್ರಕರ್ತ ಯಶವಂತ ಬೋಳೂರ್ ಅವರ ವಿವಿಧ ಹಾಡುಗಳ ವೀಡಿಯೊ ಚಿತ್ರೀಕರಣ ಸಹಿತ ಪ್ರದರ್ಶಿಸಲಾಯಿತು. ಸನಾತನಾ ನಾಟ್ಯಾಲಯ, ಸೋಲ್ ಬೀಟ್ಜ್ ಡ್ಯಾನ್ಸ್ ಅಕಾಡೆಮಿ, ರೋರ್ ಡ್ಯಾನ್ಸ್ ಸ್ಟುಡಿಯೋ ಬಳಗದಿಂದ ನೃತ್ಯ ಪ್ರದರ್ಶನ ನಡೆಯಿತು.
ಬೊಳ್ಳಿ ಬೊಲ್ಪು ಕ್ರಿಯೇಶನ್ಸ್ ಮಣಿಪಾಲ ಇವರ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮೊಗವೀರ ಹೆಲ್ಫ್‌ಲೈನ್ ಸಂಘಟನೆಯ ಪರವಾಗಿ ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬದ ಹೆಣ್ಣು ಮಗಳೊಬ್ಬಳಿಗೆ ಆರ್ಥಿಕ ನೆರವು ನೀಡಲಾಯಿತು.
ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಟ್ರಾಲ್ ಬೋಟ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕೇಸರ ಲಕ್ಷ್ಮಣ್ ಅಮೀನ್ ಕೋಡಿಕಲ್, ಉದ್ಯಮಿ ಸಿಂಧೂ ರಾಮ್ ಎ. ಪುತ್ರನ್, ಬೋಳೂರು ಮೊಗವೀರ ಮಹಾಸಭೆಯ ಅಧ್ಯಕ್ಷ ಯಶವಂತ ಪಿ. ಮೆಂಡನ್, ಬಾಲಾಂಜನೇಯ ಸ್ವಾಮಿ ಸೇವಾ ಟ್ಟಸ್ಟ್ ಅಧ್ಯಕ್ಷ ರಂಜನ್ ಎಸ್. ಕಾಂಚನ್, ಲೇಖಕ ರಾಮ ಚಂದರ್ ಬೈಕಂಪಾಡಿ, ಮಾರಿಗುಡಿ ಮ್ಯಾಟ್ ಫ್ರೆಂಡ್ಸ್ ಅಧ್ಯಕ್ಷ ಗೌತಮ್ ಸಾಲ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕವಿ ಯಶವಂತ ಬೋಳೂರು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಶಿರೀಶ್ ಕುಮಾರ್ ಹೊಸಬೆಟ್ಟು ಸ್ವಾಗತಿಸಿದರು. ತೃಪ್ತಿ ಸುವರ್ಣ ಹಾಗೂ ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಅಮೀನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net