ಕಾಸರಗೋಡು ತಲೆ ಕೆಳಗಾಗಿ ಹಾರಾಡಿದ ರಾಷ್ಟ್ರಧ್ವಜ

IMG-20220126-WA0023
Published on

ಕಾಸರಗೋಡು: ಗಣರಾಜ್ಯೋತ್ಸವದ ಅಂಗವಾಗಿ ಕಾಸರಗೋಡಿನಲ್ಲಿ ಹಾರಿಸಿದ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿದೆ.
ಜಿಲ್ಲಾ ಮಟ್ಟದ ಧ್ವಜಾರೋಹಣವನ್ನು ಸಚಿವ ಅಹ್ಮದ್ ದೇವರಕೋವ್ ನೆರವೇರಿಸಿದರು. ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದು ಸಚಿವರಾಗಲೀ ಅಥವಾ ಇತರ ಅಧಿಕಾರಿಗಳಾಗಲೀ ಗಮನಕ್ಕೆ ಬಂದಿರಲಿಲ್ಲ.
ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಿದ ನಂತರ ಸಚಿವ ಅಹಮದ್ ದೇವರಕೋವಿಲ್ ವಂದಿಸಿದರು. ಇದಾದ ಬಳಿಕ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ ಎಂದು ಮಾಧ್ಯಮಗಳು ಗಮನ ಸೆಳೆದವು. ಆಗ ಸಚಿವರು ಮತ್ತು ಇತರ ಅಧಿಕಾರಿಗಳು ಗಮನಿಸಿದರು. ನಂತರ ಧ್ವಜವನ್ನು ಮತ್ತೆ ಸರಿಯಾಗಿ ಹಾರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net