ಮನೆಯಿಂದ ಭಾರಿ ಪ್ರಮಾಣದ ತಂಬಾಕು ಉತ್ಪನ್ನ ವಶ 3.76 ಲಕ್ಷ ರೂ. ನಗದು ಜಪ್ತಿ , ಇಬ್ಬರ ಬಂಧನ

FIR-2
Published on

ಕಾಸರಗೋಡು: ಆದೂರು ಠಾಣೆ ಪೊಲೀಸರು ಮುಳಿಯಾರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ತಂಬಾಕು ಉತ್ಪನ್ನ, ನಗದು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ.


ಮುಳಿಯಾರು ಕೊಲಾಚಿಯಡ್ಕ ಕೆಟ್ಟುಂಗಲ್ಲು ನಿವಾಸಿ ಮೊಯ್ದು, ಕಾರು ಚಾಲಕ ಎಡನೀರು ನಿವಾಸಿ ಎಂ.ಎಂ.ರಶೀದ್ ಬಂಧಿತರು.
ಖಚಿತ ಮಾಹಿತಿಯನ್ವಯ ಮೊಯ್ದು ಮನೆಗೆ ಆದೂರು ಠಾಣೆ ಎಸ್.ಐ ಕೆ.ಅನುರೂಪ್ ನೇತೃತ್ವದಲ್ಲಿ ದಾಳಿ ನಡೆಸಿ, ಮನೆ ಕೊಠಡಿ ತಪಾಸಣೆ ನಡೆಸಿದಾಗ 1618 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ, 340 ಪ್ಯಾಕೆಟ್ ಸಿಗರೇಟ್, ದಾಖಲೆಗಳಿಲ್ಲದೆ ದಾಸ್ತಾನಿರಿಸಿದ್ದ 3,76,830 ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಕಾರನ್ನು ವಶಕ್ಕೆ ಪಡೆಯಲಾಗಿದೆ.


ಭಾರಿ ಪ್ರಮಾಣದಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಮಾರಾಟ ಮಾಡುವ ಜಾಲದಲ್ಲಿ ಬಂಧಿತರಿದ್ದು, ಇದರಿಂದ ಲಭಿಸಿದ ಮೊತ್ತ ಮನೆಯಲ್ಲಿ ದಾಸ್ತಾನಿರಿಸಿದ್ದಾರೆಂದು ಸಂಶಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net