

ಕಾಸರಗೋಡು: ವಯನಾಡಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳಲು ಕಾಸರಗೋಡಿನ 40 ಮಂದಿ ಪೊಲೀಸರನ್ನು ವಯನಾಡಿಗೆ ಕಳುಹಿಸಿಕೊಡಲಾಗಿದೆ.
ಹೊಸದುರ್ಗ ಠಾಣೆ ಎಸ್‌ಐ ಎಂ.ಟಿ.ಪಿ.ಸೈನುದ್ದೀನ್, ಟಿ.ಪಿ.ಮಧು, ನೀಲೇಶ್ವರದ ರತೀಶನ್ ತೃಕ್ಕರಿಪುರ ನೇತೃತ್ವದ ತಂಡ ರಕ್ಷಣಾ ಕಾರ್ಯಕ್ಕೆ ತೆರಳಿದೆ. ಕಾಸರಗೋಡು ಉಪ ವಿಭಾಗದ ಹತ್ತು, ಬೇಕಲ-ಹೊಸದುರ್ಗ ಪೊಲೀಸ್ ಉಪ ವಿಭಾಗದ 30 ಮಂದಿ ಒಳಗೊಂಡಂತೆ ಒಟ್ಟು 40 ಮಂದಿ ತಂಡದಲ್ಲಿದ್ದಾರೆ.