ಜ.4ರಂದು ಮಂಡ್ಯ ನಗರ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಿಗೆ ಕಸಾಪದಿಂದ ಆಹ್ವಾನ

01_01_Mdy_04(Kasapa Samelana)
Published on

ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜ.4ರಂದು ನಡೆಯಲಿರುವ ಮಂಡ್ಯ ನಗರ 5ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಡಾ.ಎಚ್.ಆರ್.ಕನ್ನಿಕಾ ಅವರಿಗೆ ಭಾನುವಾರ ಸ್ವಾಗತ ಸಮಿತಿ ವತಿಯಿಂದ ಆಹ್ವಾನ ನೀಡಲಾಯಿತು.

ಇಲ್ಲಿನ ಗಾಂಧಿನಗರದಲ್ಲಿರುವ ಕನ್ನಿಕಾ ಅವರ ನಿವಾಸಕ್ಕೆ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ ಅವರ ನೇತೃತ್ವದಲ್ಲಿ ತೆರಳಿದ ಕಸಾಪ ಪದಾಧಿಕಾರಿಗಳು ಅಭಿನಂದಿಸಿ ಆಹ್ವಾನ ಪತ್ರಿಕೆ ನೀಡಿ ಸ್ವಾಗತಿಸಿದರು.

ಅಶೋಕ್ ಜಯರಾಂ ಮಾತನಾಡಿ, ವ್ಯವಸ್ಥಿತ ರೂಪುರೇಷೆಗಳೊಂದಿಗೆ ಸಮ್ಮೇಳನಕ್ಕೆ ಅಗತ್ಯ ಪೂರ್ವಸಿದ್ಧತೆಗಳು ನಡೆದಿದೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ. ಯುವ ಸಾಹಿತಿ, ಶಿಕ್ಷಣ ಪ್ರೇಮಿ ಕನ್ನಿಕಾ ಅಧ್ಯಕ್ಷತೆಯ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಸಮ್ಮೇಳನಾಧ್ಯಕ್ಷೆ ಡಾ.ಎಚ್.ಆರ್.ಕನ್ನಿಕಾ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ನನ್ನನ್ನು ಗುರುತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ನವೋದಯ ಶಿಕ್ಷಣ ಸಂಸ್ಥೆ ರಾಜ್ಯದಲ್ಲಿ ಗುರುತಿಸಿಕೊಂಡಿದ್ದು, ಸಂಸ್ಥೆಯ ಮಕ್ಕಳು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಖಜಾಂಚಿ ಬಿ.ಎಂ.ಅಪ್ಪಾಜಪ್ಪ, ತಾಲೂಕು ಕಸಾಪ ಅಧ್ಯಕ್ಷ ಮಂಜು ಮುತ್ತೇಗೆರೆ, ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಭಾಸ್ಕರ್, ಗುರುಪ್ರಸಾದ್, ಗಾಮನಹಳ್ಳಿಸ್ವಾಮಿ ವಿನಯ್ ಕುಮಾರ್, ಬಿ.ಜಿ.ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net