

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅ.17 ರಿಂದ 19ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಭೆಯನ್ನು ಆಯೋಜಿಸುವ ಸಂಬಂಧ 17ರಂದು ಬೆಳಗ್ಗೆ 11.30ಕ್ಕೆ ಶ್ರೀರಂಗಪಟ್ಟಣದಲ್ಲಿ ಶಾಸಕರು, ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ, 18ರಂದು ಬೆಳಗ್ಗೆ 10.30ಕ್ಕೆ ಪಾಂಡವಪುರ, ಮಧ್ಯಾಹ್ನ 12.30ಕ್ಕೆ ಕೆ.ಆರ್.ಪೇಟೆ, 3.30ಕ್ಕೆ ನಾಗಮಂಗಲದಲ್ಲಿ ಸಮಾಲೋಚನಾ ಸಭೆ ಹಾಗೂ 19ರಂದು ಬೆಳಗ್ಗೆ 11ಗಂಟೆಗೆ ಮಳವಳ್ಳಿ, ಮಧ್ಯಾಹ್ನ 2.30ಕ್ಕೆ ಮದ್ದೂರು ಮತ್ತು ಸಂಜೆ 4.30ಕ್ಕೆ ಮಂಡ್ಯದಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.