

ಮಂಡ್ಯ: ಮಳವಳ್ಳಿ ತಾಲೂಕು ಕಸಾಪ, ದಲಿತ ಸಾಹಿತ್ಯ ಪರಿಷತ್, ಯೂನಿವರ್ಸಲ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಶಿಕ್ಷಕರ ಕವಿಗೋಷ್ಠಿ, ಸನ್ಮಾನ ಕಾರ್ಯಕ್ರಮವನ್ನು ಸೆ.7ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಮಳವಳ್ಳಿ ಕಸಾಪ ಅಧ್ಯಕ್ಷ ಎಲ್.ಚೇತನ ಕುಮಾರ್ ತಿಳಿಸಿದರು.
ಶಿಕ್ಷಕರ ಕುರಿತು ಸ್ವರಚಿತ ಕವನ ವಾಚನ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು, ಶಿಕ್ಷಕರೇತರರು ರಚಿಸಿದ ಕವನಗಳನ್ನು ಆಯೋಜಕರಿಗೆ ಸಲ್ಲಿಸಬಹುದು. ಕವನ 20 ಸಾಲುಗಳಿದ್ದು, ಸ್ವರಚಿತವಾಗಿರಬೇಕು. ಸೆ.1ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ರಚಿಸಿದ ಕವನದ ಒಂದು ಪ್ರತಿಯನ್ನು ತಮ್ಮ ಪೂರ್ಣ ವಿಳಾಸದೊಂದಿಗೆ ಆಯೋಜಕರಿಗೆ ವಾಟ್ಸ್ ಆ್ಯಪ್ ಮೂಲಕ ಅಥವಾ ಖುದ್ದಾಗಿ ತಲುಪಿಸುವಂತೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿಕ್ಷಕ, ಬರಹಗಾರ, ಕವಿ, ಸಾಹಿತಿಯಾಗಿ ಮನ್ನಣೆ ಪಡೆದ ಶಿಕ್ಷಣಾಸಕ್ತರನ್ನು ಕವಿಗೋಷ್ಠಿಯ ಅಧ್ಯಕ್ಷರನ್ನಾಗಿ ಮಾಡಲಾಗುವುದು. ಕವನ ರಚಿಸುವವರು ನೋಂದಣಿ ಮಾಡಿಕೊಳ್ಳಲು ಮೊ.ಸಂ 9741253646, 9632619156 ಸಂಪರ್ಕಿಸಬಹುದು ಎಂದರು.
ಟ್ರಸ್ಟ್ ಕಾರ್ಯದರ್ಶಿ ಟಿ.ಎಂ.ಪ್ರಕಾಶ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ, ತಾಲೂಕು ಅದ್ಯಕ್ಷ ಬಿ.ಚುಂಚಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಬೋರಯ್ಯ, ಸಾಂಸ್ಕೃತಿಕ ಕಾರ್ಯದರ್ಶಿ ರಾಜು ಇದ್ದರು.