ಡಿ.10ಕ್ಕೆ ದುದ್ದದಲ್ಲಿ ಕಸಾಪ ತಾಲೂಕು ಸಮ್ಮೇಳನ: ನಗರದಲ್ಲಿ ಪೂರ್ವಭಾವಿ ಸಭೆ

30_10_Mdy_02(Kasapa)
Published on

ಮಂಡ್ಯ: ತಾಲೂಕಿನ ದುದ್ದ ಗ್ರಾಮದಲ್ಲಿ ಡಿ.10ರಂದು ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ 17ನೇ ಸಮ್ಮೇಳನ ಆಯೋಜಿಸಲು ತೀರ್ವಾನಿಸಲಾಯಿತು. ಜತೆಗೆ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಅಧ್ಯಕ್ಷರಾಗಿ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರನ್ನು ಆಯ್ಕೆ ಮಾಡಲಾಯಿತು.

ನಗರದ ಕಸಾಪ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ನಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದುದ್ದದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ವಾನಿಸಿದ ಕಸಾಪಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸಮ್ಮೇಳನಕ್ಕೆ ಅಗತ್ಯವಿರುವ ವ್ಯವಸ್ಥೆ ಕಲ್ಪಿಸಲು ಬದ್ಧ ಎಂದು ಭರವಸೆ ನೀಡಿದರು.

ಕನ್ನಡಾಂಬೆಯ ಸೇವೆಯನ್ನು ದೇವರ ಕಾರ್ಯವೆಂದು ತಿಳಿದು ಮನದ ಅಂತರಾಳ ಪೂರ್ವಕವಾಗಿ ನಡೆಸಿಕೊಡಲು ಬದ್ಧನಾಗಿದ್ದೇನೆ. ಈ ಹಿಂದೆ ಪಾಂಡವಪುರದಲ್ಲಿ 30 ದಿನ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಗಿತ್ತು. ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ ವಾಡಿಕೊಳ್ಳಲು ಸೂಚಿಸಿದರು.

ವಿಧಾನ ಪರಿಷತ್ ವಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಾತನಾಡಿ, ಮೊದಲಿಗೆ ಸ್ವಾಗತ ಸಮಿತಿ ರಚನೆ ವಾಡಿಕೊಂಡು ಸಾಹಿತ್ಯ ವಲಯದ ಜತೆ ಚರ್ಚಿಸಿ ಒಂದು ದಿನದ ಸಮ್ಮೇಳನ ನಡೆಸುವುದು ಸೂಕ್ತ. ತಾಲೂಕಿನ ಸಮಗ್ರ ವಾಹಿತಿ ನೀಡುವ ಸಮ್ಮೇಳನ ಸ್ಮರಣ ಸಂಚಿಕೆ ಮೌಲಿಕ ಕೃತಿಯಾಗಿ ಹೊರಬರಲಿ. ಹೆಚ್ಚು ಜನರು ಸೇರುವಂತೆ ಗುಣಮಟ್ಟದ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುವಾರ ಚಾಮಲಾಪುರ ವಾತನಾಡಿ, ಸಾಹಿತ್ಯ, ಶಿಕ್ಷಣದ ಜತೆಗೆ ಜನಸಾವಾನ್ಯರು, ರೈತರಿಗೆ ಅನುಕೂಲವಾಗುವ ವಾಹಿತಿ ನೀಡುವಂತಹ ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದರು.

ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಕಸಾಪ ವಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ತಾಲೂಕು ಕಸಾಪ ಅಧ್ಯಕ್ಷ ಮಂಜು ಮುತ್ತೇಗೆರೆ, ಉಪಾಧ್ಯಕ್ಷ ಶಿವಲಿಂಗೇಗೌಡ, ಜಿಲ್ಲಾ ಕಸಾಪ ಕಾರ್ಯದರ್ಶಿ ಹುಸ್ಕೂರು ಕಷ್ಣೇಗೌಡ ವಾತನಾಡಿದರು. ತಾಲೂಕು ಕಸಾಪ ಕಾರ್ಯದರ್ಶಿ ಚಂದ್ರಲಿಂಗು, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ನಗರಾಧ್ಯಕ್ಷೆ ಸುಜಾತಾಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net