

ಹುಬ್ಬಳ್ಳಿ: ಯುವಕರು ಶರಣರ ವಚನಗಳನ್ನು ಅಧ್ಯಯನ ಮಾಡುವ ಮೂಲಕ ತಮ್ಮ ವ್ಯಕ್ತಿತ್ವ ಉತ್ತಮವಾಗಿ ನಿರ್ಮಿಸಿಕೊಳ್ಳಬೇಕು ಎಂದು ಹಿರಿಯ ಗ್ರಂಥಪಾಲಕ ಡಾ. ಮಹೇಶ ಹೊರಕೇರಿ ಹೇಳಿದರು.
ಇಲ್ಲಿಯ ಶಿರೂರ ಪಾರ್ಕ್ ಶಕುಂತಲಾ ಶಾಂತಣ್ಣ ಹೂಗಾರ ಇವರ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಗರ ತಾಲೂಕು ಟಕ ಆಯೋಜಿಸಿದ್ದ ಉಪನ್ಯಾಸ ಹಾಗೂ ಕಾವ್ಯ ವಾಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನಗಳು ಇಂದಿನ ಪ್ರತಿಯೊಂದು ಸಮಸ್ಯೆಗೆ ಪರಿಹಾರ ನೀಡುತ್ತವೆ. ಬಸವಾದಿ ಶರಣರ ವಚನಗಳು ಹಾಗೂ ಅವುಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಡಾ. ಲಿಂಗರಾಜ ಅಂಗಡಿ, ಗೌರವ ಕಾರ್ಯದಶಿರ್ ಪ್ರೊ. ಕೆ.ಎಸ್. ಕೌಜಲಗಿ, ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಲಿಂಗರಾಜ ಹೊರಕೇರಿ ಮಾತನಾಡಿದರು.
ಕಾವ್ಯ ವಾಚನ: ಗಿರಿಜಾ ಚಿಕ್ಕಮಠ, ಸಂಧ್ಯಾ ದಿಕ್ಷಿತ, ಎಂ.ಎಚ್. ಶೇಖ, ಪಾರ್ವತಿ ಕಂಬಳಿ, ಪದ್ಮಜಾ ಉಮರ್ಜಿ, ಆರ್.ಎಂ. ಗೋಗೇರಿ ಅವರು ಕಾವ್ಯ ವಾಚನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂದ ಅಧ್ಯ ಚಂದ್ರಕಾಂತ ಬೆಲ್ಲದ ಮಾತನಾಡಿದರು. ಚನ್ನಬಸಪ್ಪ ಧಾರವಾಡಶೆಟ್ಟರ, ಶಾಂತಣ್ಣ ಹೂಗಾರ ಉಪಸ್ಥಿತರಿದ್ದರು.
ಪ್ರಗತಿ ಅಳ್ಳಗಿ ಪ್ರಾರ್ಥಿಸಿದರು. ವಿರುಪಾ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕಿ ಜಯಶ್ರೀ ಬೇವೂರ, ಡಾ. ಸುರೇಶ ಹೊರಕೇರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಬಿ.ಎಸ್. ಮಾಳವಾಡ ವಂದಿಸಿದರು.