ಕನ್ನಡಿಗರನ್ನು ಒಂದಾಗಿಸುವ ಮಹಾಮನೆಯೆ ಕಸಾಪ

ANK SANMAN
Published on

ಅಂಕೋಲಾ: ಕನ್ನಡ ಎನ್ನುವುದೇ ಒಂದು ಭಾವೈಕ್ಯದ ಪ್ರತೀಕ. ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುತ್ತದೆ. ಇಂಥಹ ಸಾಮರಸ್ಯದ ಕನ್ನಡ ಹಾಗೂ ಕನ್ನಡಿಗರ ಮಾತೃ ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಇದು ಎಲ್ಲ ಕನ್ನಡಿಗರನ್ನು ಒಂದಾಗಿಸುವ ಮಹಾಮನೆಯಾಗಿದೆ ಎಂದು ಕಾರವಾರದ ಹಿರಿಯ ಲೇಖಕಿ ಪ್ರೇಮಾ ಟಿ.ಎಂ.ಆರ್. ಹೇಳಿದರು.

ಪಟ್ಟಣದ ಪಿ.ಎಂ. ಹೈಸ್ಕೂಲ್​ನ ರೈತ ಭವನದಲ್ಲಿ ಉ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಕಸಾಪ ಅಂಕೋಲಾ ಘಟಕದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಪುಸ್ತಕ ಬರೆದರೆ ಸಾಲದು, ಕನ್ನಡವನ್ನು ಹಾಗೂ ಪರಿಷತ್ತನ್ನು ಕಟ್ಟುವ ಕೆಲಸದಲ್ಲಿಯೂ ಬರಹಗಾರರು ತೊಡಗಿಸಿಕೊಳ್ಳಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಅಂಕೋಲಾ ತಾಲೂಕಾಧ್ಯಕ್ಷ ಬಾಲಚಂದ್ರ ನಾಯಕ ಅವರು ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಕೆನರಾ ವೆಲ್ಪೇರ್ ಟ್ರಸ್ಟ್ ಆಡಳಿತಾಧಿಕಾರಿ ರವೀಂದ್ರ ಕೇಣಿ, ಕಸಾಪ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿದರು.

ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸಿದ್ದರು. ಆನ್​ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಜೆ. ಪ್ರೇಮಾನಂದ ಬಹುಮಾನಿತರ ಯಾದಿ ವಾಚಿಸಿದರು. ಹಿರಿಯ ಲೇಖಕ ಜಿ.ಆರ್. ನಾಯಕ ಕನ್ನಡದ ಗೀತೆ ಪ್ರಸ್ತುತ ಪಡಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿದರು. ಕಸಾಪ ಜಿಲ್ಲಾ ಸಮಿತಿ ಸದಸ್ಯ ಜಯಶೀಲ ಆಗೇರ, ಲೇಖಕ ಮಹಾಂತೇಶ ರೇವಡಿ ಕಾರ್ಯಕ್ರಮ ನಿರ್ವಹಿಸಿದರು.

ಹಿರಿಯ ಸಾಹಿತಿಗಳಾದ ಮೋಹನ ಹಬ್ಬು, ವಿಠ್ಠಲ ಗಾಂವಕರ, ನಾಗೇಂದ್ರ ತೊರ್ಕೆ, ನಾಗೇಶ ಅಂಕೋಲೇಕರ, ಶ್ರೀಧರ ನಾಯಕ, ಶ್ಯಾಮಸುಂದರ ಗೌಡ, ಜನಾರ್ದನ ನಾಯಕ, ಸಂದೀಪ ನಾಯಕ, ಪಾಲ್ಗುಣ ಗೌಡ, ರಫೀಕ್ ಶೇಖ್​ವು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net