ಕನ್ನಡ ಸಾಹಿತ್ಯ ಪರಿಷತ್ ಕಿಸಿ ಬಾಪ್ ಕಿ ಜಾಗಿರ್ ನಹಿ ಹೈ ಎಂದ ಸಾಹಿತಿ ಹುಡಗಿ ಅವರ ಟಾರ್ಗೆಟ್ ಯಾರು?

RK_Hudagi_Seminar_on_Gulbarga_Zilla_Darshana
Published on

ಕಲಬುರಗಿ: ಸಮ್ಮೇಳನದ ಅಧ್ಯಕ್ಷರ ನೇಮಕದ ವಿಷಯದಲ್ಲಿ ನಡೆದ ಘಟನೆ ಮೆಲಕು ಹಾಕಿದ ಹಿರಿಯ ಸಾಹಿತಿ ಆರ್.ಕೆ. ಹುಡಗಿ ಅವರು, ಸಂಸ್ಕೃತಿ ಸಚಿವ ಸಿ.ಟಿ ರವಿ ಹಾಗೂ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರ ವಿರುದ್ಧ ಕಿಡಿಕಾರಿದರು.

ಸಮನಾಂತರ ವೇದಿಕೆ-1ರಲ್ಲಿ ಆಯೋಜಿಸಿದ ಕಲಬುರಗಿ ಜಿಲ್ಲಾ ದರ್ಶನ ಗೋಷ್ಠಿ 3ರಲ್ಲಿ ಕಿಡಿಕಾರಿದ ಹುಡಗಿ, ಕನ್ನಡ ಸಾಹಿತ್ಯ ಪರಿಷತ್ ಕಿಸಿ ಬಾಪ್ ಕಿ ಜಾಗಿರ್ ನಹಿ ಹೈ.. ಪದ ಬಳಸಿ ಚಾಟಿ ಬೀಸಿದರು.

ಮಂಗಳೂರು ಭಾಗದ ಸಾಹಿತಿಗಳನ್ನು ಸರ್ವಾಧ್ಯಕ್ಷರ ಸ್ಥಾನಕ್ಕೆ ನೇಮಕ ಮಾಡಲು ಒತ್ತಡ ಹಾಕಲಾಯಿತು. ಅಲ್ಲದೆ ಅವರನ್ನು ನೇಮಕ ಮಾಡದಿದ್ದರೆ ಸಮ್ಮೇಳನ ನಡೆಯಲು ಬಿಡುವುದಿಲ್ಲ ಎಂಬ ಬೆದರಿಕೆಯೂ ಬಂದಿತು. ಆದರೆ ಈ ಬಗ್ಗೆ ಡಾ. ಬಳಿಗಾರ್ ಚಕಾರವೆತ್ತಲಿಲ್ಲ.

ಕಸಾಪ ರಾಜಶಾಹಿ ವ್ಯವಸ್ಥೆಯಲ್ಲಿ ಬೆಳೆದು ಬಂದಿದೆ. ಆದರೆ ಶ್ರೀ ಶ್ರೀ ಶ್ರೀ ಪೂಜ್ಯ ಮನು ಬಳಿಗಾರ ಅವರು ಕಸಾಪವನ್ನು ಅಸಹಾಯಕ ಸಂಸ್ಥೆಯನ್ನಾಗಿ ಮಾಡಿದ್ದಾರೆ ಎಂದು ದೂರಿದ ಅವರು, ಸಮ್ಮೇಳನ ಮುಗಿದ ತಕ್ಷಣ ಕಸಾಪ ಅಧ್ಯಕ್ಷರಾದ ಮನು ಬಳಿಗಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net