

ಹನುಮಸಾಗರ: ಡಾ.ಬಿ.ಸರೋಜಾದೇವಿ ಅವರು ನಟನಾ ಕೌಶಲ್ಯದಿಂದ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು ಎಂದು ಕಸಾಪ ತಾಲೂಕಾಧ್ಯಕ್ಷ ಲೆಂಕೇಪ್ಪ ವಾಲಿಕಾರ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಕಸಾಪನಿಂದ ಹಮ್ಮಿಕೊಂಡಿದ್ದ ಡಾ.ಬಿ.ಸರೋಜಾದೇವಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಕನ್ನಡ ಚಿತ್ರರಂಗ ಒಬ್ಬ ಶ್ರೇಷ್ಠ ಕಲಾವಿದೆಯನ್ನು ಕಳೆದುಕೊಂಡಿದೆ. ಮೂರಕ್ಕೂ ಹೆಚ್ಚು ಭಾಷೆಯ ಚಿತ್ರರಂಗದಲ್ಲಿ ಅನೇಕ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ, ಜನರ ಮೆಚ್ಚುಗೆಗೆ ಸರೋಜಾದೇವಿ ಪಾತ್ರರಾಗಿದ್ದರು ಎಂದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಪದಾಧಿಕಾರಿಗಳಾದ ಅಬ್ದುಲ್ ಕರಿಂ ವಂಟೆಳಿ, ಮಲ್ಲಯ್ಯ ಕೋಮಾರಿ, ಅಬ್ದುಲ್ ರಜಾಕ ಟೇಲರ್, ರೇಣುಕಾ ಪುರದ, ಗ್ಯಾನಪ್ಪ ತಳವಾರ, ಬಸವರಾಜ ದಟ್ಟಿ ಇತರರಿದ್ದರು.