ಗದಗ: 18 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

16GDG07
Published on
ಗದಗ: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಗದಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕಗಳ ಸಹಯೋಗದಲ್ಲಿ ಇದೇ ದಿ. 18 ರಂದು ಶುಕ್ರವಾರ ಕುರ್ತಕೊಟಿ ಗ್ರಾಮದ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಗದಗ ತಾಲೂಕು 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಪ್ರೊ.ಕೆ.ಎಚ್. ಬೇಲೂರ ಹಾಗೂ ಕಸಾಪ ಗದಗ ತಾಲ್ಲೂಕು ಅಧ್ಯಕ್ಷೆ ಡಾ.ರಶ್ಮಿ ಅಂಗಡಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಜಂಟಿಯಾಗಿ ಈ ವಿಷಯ ತಿಳಿಸಿದರು. ಅಂದು ಬೆಳಿಗ್ಗೆ 8 ಕ್ಕೆ ಕುರ್ತಕೋಟಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಮೈಲಾರಪ್ಪ ಇನಾಮತಿ ರಾಷ್ಟ್ರದ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜ ವಿವೇಕಾನಂದಗೌಡ ಪಾಟೀಲ್ ಹಾಗೂ ಡಾ.ರಶ್ಮಿ ಅಂಗಡಿ ಕನ್ನಡ ಧ್ವಜಾರೋಹಣ ನೆರವೇರಿಸುವರು. ಅಂದು ಬೆಳಿಗ್ಗೆ 8.30 ಕ್ಕೆ ಕುರ್ತಕೊರ್ಟಿ ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ಸರೋಜಾ ಬೂದಪ್ಪ ಅಂಗಡಿ ಅವರು ಕನ್ನಡ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆ ಕುರ್ತಕೋಟಿ ಗ್ರಾಮ ಪಂಚಾಯತಿಯಿಂದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀ ದೇವಸ್ಥಾನ, ಶ್ರೀ ಮಂಕಮ್ಮ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಶರಣ ಬಸವೇಶ್ವರ ದೇವಸ್ಥಾನ, ಶ್ರೀ ಸಂಗೊಳ್ಳಿ ರಾಯಣ್ಣನ ಮೂರ್ತಿವರೆಗೂ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಹೊಸಳ್ಳಿಯ ಮ.ನಿ.ಪ್ರ ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮೀಜಿ ಸಾನಿದ್ಯ ವಹಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತಿ ವಹಿಸಲಿದ್ದಾರೆ. ಜಗನ್ನಾಥಸಿಂಗ್ ಜಮಾದಾರ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ನಿಕಟಪೂರ್ವ ಅಧ್ಯಕ್ಷೆ ಅಸುಂಡಿಯ ಶಿವಶರಣೆ ಡಾ.ನೀಲಮ್ಮ ತಾಯಿಯವರು ಉಪಸ್ಥಿತರಿರುವರು.
ರಾಜ್ಯದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು, ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಚ್.ಕೆ.ಪಾಟೀಲ್ ಅವರು ಸಮ್ಮೇಳನವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದÀ ಬಸವರಾಜ ಬೊಮ್ಮಾಯಿ, ರೋಣ ಶಾಸಕರಾಗಿರುವ ಜಿ.ಎಸ್.ಪಾಟೀಲ್ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಿಪ ಸದಸ್ಯ ಪ್ರೊ.ಎಸ್.ವಿ.ಸಂಕನೂರ ಅವರು ಕೃತಿ ಬಿಡುಗಡೆಗೊಳಿಸುವರು. ನರಗುಂದ ಶಾಸಕ ಸಿ.ಸಿ.ಪಾಟೀಲ ಅವರು ಚಿತ್ರ ಸಂತೆ ಉದ್ಘಾಟಿಸಲಿದ್ದಾರೆ. ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಚಿಣ್ಣರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಮಾಜಿ ಶಾಸಕ ಡಿ.ಆರ್.ಪಾಟೀಲ್ ಸಮ್ಮೇಳನಾದ್ಯಕ್ಷರ ಭಾಷಣ ಪ್ರತಿ ಬಿಡುಗಡೆ ಮಾಡಲಿದ್ದಾರೆ.
ಮದ್ಯಾಹ್ನ 2 ಕ್ಕೆ ವಿಚಾರ ಗೋಷ್ಠಿ ನಡೆಯಲಿದೆ, ಅಧ್ಯಕ್ಷತೆ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಡಾ.ವ್ಹಾಯ್.ಆರ್. ಬೇಲೇರಿ ಆಶಯ ನುಡಿ ಆಡುವರು, ಕುರ್ತಕೋಟಿ ಸಾಹಿತ್ಯ ಸಂಸ್ಕøತಿ ಮತ್ತು ಪರಂಪರೆ ಹಾಗೂ ಕೀರ್ತಿನಾಥ ಕುರ್ತಕೋಟಿ ಕುರಿತು ಡಾ.ದತ್ತ ಪ್ರಸನ್ನ ಪಾಟೀಲ್ ಹಾಗೂ ಆಧುನಿಕ ಕನ್ನಡ ಸಾಹಿತ್ಯಕ್ಕೆ ಗದಗ ತಾಲೂಕಿನ ಕೊಡುಗೆ ಕುರಿತ ಉಪನ್ಯಾಸ ಡಾ. ಶರಣಬಸವ ವೆಂಕಟಾಪೂರ ನೀಡುವರು.
ಮದ್ಯಾಹ್ನ 3 ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಬೂದಿಸ್ವಾಮಿ ಹಿರೇಮಠದ ಶ್ರೀ ಕುಮಾರದೇವರು ಸಾನಿದ್ಯ ವಹಿಸಿ, ಉದ್ಘಾಟಿಸಲಿದ್ದಾರೆ. ಶ್ರೀಮತಿ ಭಾರತಿ ಮೋಹನ ಕೋಟಿ ಅಧ್ಯಕ್ಷತೆ ವಹಿಸುವರು, ಡಾ. ಎಚ್.ಎ. ಪೂಜಾರ ಆಶಯ ನುಡಿ ಆಡಲಿದ್ದಾರೆ, ಮರುಳಸಿದ್ದಪ್ಪ ದೊಡ್ಡಮನಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5 ಕ್ಕೆ ಸಮ್ಮೇಳನಾದ್ಯಕ್ಷರ ಬದುಕು ಬರಹ ಸಂವಾದ ನಡೆಯಲಿದೆ. ಎ.ಎನ್.ನಾಗರಳ್ಳಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 6 ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಡಾ.ರಶ್ಮಿಅಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 7 ಕ್ಕೆ ಕೋಟ್ಟೂರೇಶ್ವರ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ನಿವೃತ್ತ ಉಪನ್ಯಾಸಕರಾಗಿರುವ ಕೆ.ಎಚ್. ಬೇಲೂರ ಅವರು ಭಾಗವಹಿಸಲಿದ್ದಾರೆ. ಸಂಜೆ 8 ಕ್ಕೆ ಸಮಾರೋಪ ನಡೆಯಲಿದೆ, ಪ್ರಭುಲಿಂಗದೇವರು ಸಾನಿದ್ಯ ವಹಿಸಲಿದ್ದಾರೆ. ಬಿ.ಆರ್.ಪೋಲಿಶ್ ಪಾಟೀಲ್ ಸಮಾರೋಪ ನುಡಿ ಆಡಲಿದ್ದಾರೆ. ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಅದ್ಯಕ್ಷತೆ ವಹಿಸಲಿದ್ದಾರೆ. ಸಂಜೆ 9 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ, ಅಭಿನವ ಮಲ್ಲಜ್ಜನವರು ಸಾನಿದ್ಯ ವಹಿಸಲಿದ್ದಾರೆ. ರಾಜೇಸಾಬ ತಹಶೀಲ್ದಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net