

ವಿಶ್ವರಂಗಭೂಮಿ ದಿನಾಚರಣೆ: ಚಿನ್ಮಯ ಕಲಾಶ್ರೀ, ರಂಗಗೌರವ ಪ್ರಶಸ್ತಿ ಪ್ರದಾನ
ಗದಗ: ನಾಟಕ ಸಾಹಿತ್ಯದ ಮಹತ್ವದ ಪ್ರಕಾರವಾಗಿದ್ದು, ಅಭಿನಯದ ಮೂಲಕ ಪ್ರೇಕ್ಷಕರಲ್ಲಿ ಒಳನೋಟವನ್ನು ಉಂಟು ಮಾಡುತ್ತದೆ. ನವರಸಗಳಿಂದ ತುಂಬಿದ ಈ ಮಾಧ್ಯಮ ಪ್ರೇಕ್ಷಕ ಮತ್ತು ನಟ ಮುಖಾಮುಖಿಯ ಸಂದರ್ಭವನ್ನು ಏರ್ಪಡಿಸುತ್ತದೆ. ಇತ್ತಿಚಿನ ದಿನಗಳಲ್ಲಿ ರಂಗಭೂಮಿಯ ಪ್ರಾಮುಖ್ಯತೆ ಕ್ಷೀಣಿಸುತ್ತಿದ್ದು, ಯುವಜನ ಈ ಚಟುವಟಿಕೆಗಳಲ್ಲಿ ತೊಡುಗುವಂತೆ ಮಾಡುವ ಅನಿವಾರ್ಯ ಉಂಟಾಗಿದೆ ಎಂದು ಪ್ರೊ. ಅನ್ನದಾನಿ ಹಿರೇಮಠ ಅವರು ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಇವರ ಸಹಯೋಗದಲ್ಲಿ ಗದುಗಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಜರುಗಿದ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಾಟಕಗಳು ನೈಜ ಅನುಭವವನ್ನು ಉಂಟು ಮಾಡುತ್ತವೆ ಎಂದು ತಿಳಿಸಿದರು.
ಆಧುನಿಕ ರಂಗಭೂಮಿ ಕುರಿತು ಉಪನ್ಯಾಸ ನೀಡಿದ ರಂಗ ನಿರ್ದೇಶಕ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರು ರಂಗಭೂಮಿಯಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಪ್ರೇಕ್ಷಕರನ್ನು ಸೆಳೆಯುವ ಕಾರ್ಯವನ್ನು ಮಾಡಬೇಕಾಗಿದೆ. ಯುವಜನಾಂಗಕ್ಕೆ ಶಿಬಿರಗಳನ್ನು ಸಂಘಟಿಸಿ ಆಸಕ್ತಿ ಬೆಳೆಸಬೇಕೆಂದು ತಿಳಿಸಿದರು.
ಚಿನ್ಮಯ ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದ ವಿಜಯಕುಮಾರ ಜಿತೂರಿಯವನ್ನು ಶಾಲಾ ಹಂತದಲ್ಲಿ ಶಿಕ್ಷಕರಿಂದ ಅಭಿನಯ ಕಲೆಯಲ್ಲಿ ಪ್ರೋತ್ಸಾಹ ದೊರೆಯಿತು. ನಂತರ ಗದುಗಿನ ಅನೇಕ ಸಂಘಟನೆಗಳ ನಾಟಕಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದುದರ ಫಲವಾಗಿ ಮುಂದೆ ಬೆಂಗಳೂರಿನಲ್ಲಿ ಹೆಸರಾಂತ ರಂಗ ಸಂಸ್ಥೆಗಳಲ್ಲಿ ಹಾಗೂ ಚಲನಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಯಿತು. ಅಭಿನಯದ ಜೊತೆಗೆ ಹಾಡುಗಾರಿಕೆ ಕಲಿತಿದ್ದರಿಂದ ಹೆಚ್ಚು ಅವಕಾಶಗಳು ದೊರೆತವು. ಇಂದಿನ ಯುವಪೀಳಿಗೆ ರಂಗಭೂಮಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ರಂಗಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಹಿರಿಯ ರಂಗ ಕಲಾವಿದೆ ಕವಿತಾ ಕಾಶಪ್ಪನವರು ಬದುಕಿನ ಮೌಲ್ಯಗಳನ್ನು ತಿಳಿಸಲು ನಾಟಕಗಳು ಪರಿಣಾಮಕಾರಿ ಮಾಧ್ಯಮವಾಗಿದೆ. ಕುಟುಂಬ ಮತ್ತು ಸಮಾಜದಲ್ಲಿ ಪ್ರೋತ್ಸಾಹ ದೊರೆತಾಗ ಮಾತ್ರ ಮಹಿಳೆಯರು ಅಭಿನಯ ಕಲೆಯಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಧ್ಕಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ತವರೂರು ಗದುಗಿನ ಪರಿಸರವಾಗಿದೆ. ರಂಗ ಚಟುವಟಿಕೆಗಳು ನಿರಂತರವಾಗಿ ಜರುಗುವ ಹಿನ್ನೆಲೆಯಲ್ಲಿ ಇಲ್ಲಿಯ ಎಲ್ಲ ಕಲಾ ಸಂಘಟನೆಗಳು ಒಗ್ಗೂಡಿ ಕಾರ್ಯಮಾಡಬೇಕು. ಮಕ್ಕಳಿಗೆ ರಂಗ ಕಲೆಯನ್ನು ಕಲಿಸಿಕೊಡುವ ಮೂಲಕ ಹೊಸ ತಲೆಮಾರಿನ ಸೃಷ್ಠಿಯಾಗಬೇಕೆಂದು ತಿಳಿಸಿದರು.
ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಬಡಿಗೇರ ಅವರು ಮಾತನಾಡಿ, ರಂಗಕಲೆಯಲ್ಲಿ ಪ್ರೋತ್ಸಾಹಿಸವ ನಿಟ್ಟಿನಲ್ಲಿ ಕಳೆದ ದಶಕದಿಂದ ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡುತ್ತಾ ಬಂದಿದ್ದೇವೆ. ಗದುಗಿನ ರಂಗ ಪರಿಸರವನ್ನು ಇನ್ನಷ್ಟು ಸುಂದರಗೊಳಿಸುವ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ. ಎಚ್. ಬೇಲೂರ, ಡಾ. ರಾಜಶೇಖರ ದಾನರಡ್ಡಿ, ಬಸವರಾಜ ನೆಲಜೇರಿ, ತುಕಾರಾಮ ಪಾಂಡ್ರೆ, ರಾಜಶೇಖರ ಪಾಟೀಲ, ಮುರಳಿಧರ ಸಂಕನೂರ, ಶ್ಯಾಮಸುಂದರ ಕುಲಕರ್ಣಿ, ಬಸವರಾಜ ವಾರಿ, ಡಾ. ಬಿ.ಬಿ.ಹೊಳಗುಂದಿ, ಶಶಿಧರ ರೇಷ್ಮೆ, ಅನಂತಮೋಹನ ಭಟ್, ಮಾಲತೇಶಗೌಡ ಪಾಟೀಲ, ಕಾಶೀನಾಥಸಾ ಜಿತೂರಿ, ರಂಗಪ್ಪ ಹುಯಿಲಗೋಳ, ಶಿವು ಭಜಂತ್ರಿ, ಬಾಹುಬಲಿ ಜೈನರ್, ಅಶೋಕ ಗಿರಡ್ಡಿ, ಮಲ್ಲಪ್ಪ ಡೋಣಿ, ಯಲ್ಲಪ್ಪ ಹಂದ್ರಾಳ, ಶಕುಂತಲಾ ಸಿಂಧೂರ, ರೂಪಾ ಜಿತೂರಿ, ರಾಜೇಶ್ವರಿ ಬಡ್ನಿ, ಸಿ. ಎಂ. ಮಾರನಬಸರಿ, ಅನಸೂಯಾ ಮಿಟ್ಟಿ, ಶುಭಾಂಗಿ ದ್ಯಾಮೇನಹಳ್ಳಿ, ಷಡಕ್ಷರಿ ಮೆಣಸಿನಕಾಯಿ, ಶೈಲಶ್ರೀ ಕಪ್ಪರದ, ಎಚ್.ಟಿ.ಸಂಜೀವಸ್ವಾಮಿ, ಬಿ.ಎಸ್.ಹಿಂಡಿ, ಅಮರೇಶ ರಾಂಪೂರ, ಕೆ.ಜಿ.ವ್ಯಾಪಾರಿ, ಪ್ರ.ತೋ.ನಾರಾಯಣಪೂರ, ದಿಲೀಪಕುಮಾರ ಮುಗಳಿ, ಶಶಿಕಾಂತ ಕೊರ್ಲಹಳ್ಳಿ, ಜಿ.ಎ.ಪಾಟೀಲ, ಶರಣಪ್ಪ ಹೊಸಂಗಡಿ, ಶಾರದಾ ಕಾತರಕಿ, ಸುಧಾ ಬಳ್ಳಿ, ಪ್ರಶಾಂತ ಪಾಟೀಲ, ಅಮೃತಾ ಚನ್ನಪಗೌಡರ, ಸತೀಶ ಚನ್ನಪ್ಪಗೌಡರ, ಅಮರೇಶ ರಾಂಪೂರ, ಚನವೀರಪ್ಪ ದುಂದೂರ, ಎಸ್.ಸಿ.ಹಾಲಕೇರಿ, ರತ್ನಾ ಪುರಂತರ, ಆರ್.ಡಿ.ಕಪ್ಪಲಿ, ಮೊದಲಾದವರು ಉಪಸ್ಥಿತರಿದ್ದರು.
ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್.ಬಾಪುರಿ ಸ್ವಾಗತಿಸಿದರು. ಸತೀಶ ಚನ್ನಪ್ಪಗಢ್ರ ವಂದಿಸಿದರು.
ಫೋಟೋ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯಿಂದ ಜರುಗಿದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯಕುಮಾರ ಚಿತೂರಿ ಅವರಿಗೆ ಚಿನ್ಮಯ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಫೋಟೋ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯಿಂದ ಜರುಗಿದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಕವಿತಾ ಕಾಶಪ್ಪನವರ ಅವರಿಗೆ ರಂಗಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.