ಫಾದರ್ ಚಸರಾ ಪ್ರಶಸ್ತಿ ಪ್ರಕಟ

Kasapa datti - Prof. G S Siddalinghia
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡಲಾಗುವ 2024ನೇ ಸಾಲಿನ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಸಾಹಿತಿ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಹಾಗೂ ಸಂಗೀತ ನಿರ್ದೇಶಕ ಪ್ರವೀಣ್ ದತ್ ಸ್ಟೀಫನ್ ಆಯ್ಕೆಯಾಗಿದ್ದಾರೆ.

ಕನ್ನಡದಲ್ಲಿಯೇ ಕ್ರೈಸ್ತರ ಪ್ರಾರ್ಥನೆ ನಡೆಯಬೇಕು ಎಂದು ಕನ್ನಡಿಗರಿಗೆ ದೊರಕಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಕನ್ನಡ ಭಾಷೆ- ಸಾಹಿತ್ಯ- ಸಂಸ್ಕೃತಿಗಳ ಉಳಿವಿಗಾಗಿ ಸುದೀರ್ಘ ಹೋರಾಟ ಮಾಡಿದವರು ಫಾದರ್ ಚಸರಾ.ಶನಿವಾರ (ಮಾ.16) ಕಸಾಪದ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದು, ಎಸ್‌ಎಂಎಂಐ ಧಾರ್ಮಿಕ ಸಭೆ ಕರ್ನಾಟಕ ಪ್ರಾಂತ್ಯಾಧಿಕಾರಿ ಡಾ.ಸಿಸ್ಟರ್ ಜೆಸ್ಸಿ ಮರ್ಲಿನ್, ಮಹಾರಾಣಿ ಕ್ಲಸ್ಟರ್ ವಿವಿ ಪ್ರಾಧ್ಯಾಪಕ ಡಾ.ಸಿ.ಜಿ. ಲಕ್ಷ್ಮೀಪತಿ ಇತರರು ಭಾಗವಹಿಸಲಿದ್ದಾರೆ.

ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯ ಸಮಿತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net